Site icon Suddi Belthangady

ಶಿಲಾ೯ಲು: ಶ್ರೀ ಮಹಾಲಿಂಗೇಶ್ವರ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ

ಬೆಳ್ತಂಗಡಿ: ಶಿಲಾ೯ಲು ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಳೆದ ವಷ೯ ಡಿ. 24 ರಿಂದ 28 ರವರೆಗೆ ವಿಜೃಂಭಣೆಯಿಂದ ನಡೆಯಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ದೇವಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಏಜೆಂಟ್ ಅಗಿ, ದೇವಸ್ಥಾನದ ಅಡಳಿತಾಧಿಕಾರಿಯಾಗಿ, ಪಶುಸಂಗೋಪನ ಇಲಾಖೆಯ ಪಶುಪರಿವೀಕ್ಷಕ ರಮೇಶ್ ಅಡಳಿತಾಧಿಕಾರಿಯಾಗಿ ಅಡಳಿತ ವಹಿಸಿಕೊಂಡ ಮೇಲೆ ಕಾಂಗ್ರೆಸ್ ಪಕ್ಷದ ಏಜೆಂಟ್ ರಂತೆ ಹಿಂದೂ ವಿರೋಧಿ ದೋರಣೆ ಮಾಡುತ್ತಿದ್ದು, ಶ್ರೀ ದೇವರ ಬ್ರಹ್ಮಕಲಶೋತ್ಸವ ಸಂಧರ್ಭದಲ್ಲಿ ದೇವರಲ್ಲಿ ಪ್ರಾಥ೯ನೆ ಮಾಡಿಕೊಂಡಿರುವ ಪ್ರಕಾರ ದೇವರ ಪ್ರತಿಷ್ಠ ದಿನವನ್ನು ಮಾಡಬೇಕಾಗಿದೆ.

ಅದರೆ ದೇವಸ್ಥಾನದ ಅಡಳಿತಧಿಕಾರಿ ಪ್ರತಿಷ್ಠಾ ದಿನವನ್ನು ಮಾಡಲು ಅಗುವುದಿಲ್ಲ ಎಂದು ಹೇಳುತ್ತಿದ್ದಾನೆ. ಯಾವುದೇ ಪೂಜೆ ಪುರಸ್ಕಾರ ಮಾಡದೇ ಹಿಂದೂ ಧರ್ಮದ ಭಾವನೆಗಳಿಗೆ ಹಾಗೂ ಶ್ರಿ ಮಹಾಲಿಂಗೇಶ್ವರ ದೇವರ ಭಕ್ತರಿಗೆ ತೊಂದರೆ ನೀಡುತ್ತಿದ್ದು, ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ಧೋರಣೆಯು ಹಳ್ಳಿ ಪ್ರದೇಶದ ಒಂದು ದೇವಸ್ಥಾನದಲ್ಲಿ ಕಂಡು ಬರುತ್ತಿದ್ದು, ಇದಕ್ಕೆಲ್ಲಾ ಕಾರಣಿಭೂತನಾದ ಅಡಳಿತಾಧಿಕಾರಿಯಾದ ರಮೇಶ್ ಹಾಗೂ ಅವರಿಗೆ ಮಾಗ೯ದಶ೯ನ ಮಾಡುತ್ತಿರುವ ಕಾಂಗ್ರೆಸ್ ನ ಪಟ್ಟಾಬದ್ದ ಶಕ್ತಿಗಳಿಂದಾಗಿ ಇಂದು ಎಷ್ಟೋ ಪ್ರಾಚೀನ ಹಿಂದೂ ಶ್ರದ್ದಾ ಕೇಂದ್ರವೊಂದು ಅಪವಿತ್ರಗೊಳ್ಳುತ್ತಿದ್ದೆ. ಇದು ಕಾಂಗ್ರೆಸ್ ಸರಕಾರದ ಗುಪ್ತ ಅಜಂಡಾದಂತೆ ಕಾಣುತ್ತಿದೆ.

Exit mobile version