Site icon Suddi Belthangady

ಧರ್ಮಸ್ಥಳ ಕನ್ಯಾಡಿ ಸಮೀಪ ಬಸ್-ಬೈಕ್ ನಡುವೆ ಅಪಘಾತ-ಬೈಕ್ ಸವಾರ ಉಜಿರೆ ಅಶ್ವತಕಟ್ಟೆ ನಿವಾಸಿ ಗಂಭೀರ

ಕನ್ಯಾಡಿ: ಇಲ್ಲಿನ ಆರ್ಲ ಕ್ರಾಸ್ ಬಳಿ ಖಾಸಗಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಗಂಭೀರ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ಡಿ.18ರ ರಾತ್ರಿ 11 ಗಂಟೆಯ ಸುಮಾರಿಗೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಉಜಿರೆಯ ಅಶ್ವತಕಟ್ಟೆ ನಿವಾಸಿ ಸುರೇಂದ್ರ ಗೌಡ ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡಿರುವ ಬೈಕ್ ಸವಾರನನ್ನು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ‌ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿದುಬಂದಿದೆ.

Exit mobile version