Site icon Suddi Belthangady

ಡಿ. 23 – 25: ಗುರುವಾಯನಕೆರೆ ಶ್ರೀ ಅಯ್ಯಪ್ಪ ಸ್ವಾಮಿ ಪುನರ್ ಪ್ರತಿಷ್ಠೆ, ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ


ಗುರುವಾಯನಕೆರೆ: ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಗುರುವಾಯನಕೆರೆಯ ಅಯ್ಯಪ್ಪ ನಗರದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಪುನರ್ ಪ್ರತಿಷ್ಟಾ ಬ್ರಹ್ಮಕಲಶೋತ್ಸವವು ಡಿ. 23 ರಿಂದ ಡಿ.25 ರವರೆಗೆ ವಿಜೃಂಭನೆಯಿಂದ ನಡೆಯಲಿದೆ.

ಶ್ರೀ ಮಂದಿರದಲ್ಲಿ ಅಷ್ಠಕುಲ ನಾಗದೇವರು, ಮಹಮ್ಮಾಯಿ ಅಮ್ಮನವರು ಹಾಗೂ ಪರಿವಾರ ದೈವಗಳಿಂದ ಸಾನಿಧ್ಯ ವೃದ್ದಿಯಾಗಿ ಶ್ರೀ ಅಯ್ಯಪ್ಪ ಸ್ವಾಮಿಯ ಮಂದಿರವು ಕಾರಣಿಕ ಕ್ಷೇತ್ರವಾಗಿ ಬೆಳೆದು ಬಂದಿದೆ. ಮಂದಿರದಲ್ಲಿ ಪ್ರತಿ ಸಂಕ್ರಮಣ ಪೂಜೆ, ಭಜನೆ ಅಲ್ಲದೇ ಅಯ್ಯಪ್ಪ ವೃತದಾರಿಗಳು ಪ್ರತಿ ಸಂಕ್ರಮಣದಂದು ಇರುಮುಡಿ ಕಟ್ಟಿ ಶಬರಿಮಲೆ ಯಾತ್ರೆ ಕೈಗೊಂಡು ಪುನೀತರಾಗಿದ್ದಾರೆ.

ಪ್ರತಿ ವರ್ಷ ದೀಪೋತ್ಸವ, ಸತ್ಯನಾರಾಯಣ ಪೂಜೆ, ದೈವಗಳಿಗೆ ಪರ್ವ ಸೇವೆ, ನಾಗರಪಂಚಮಿ ಪೂಜೆ ಮಾತ್ರವಲ್ಲದೇ ಶ್ರೀ ಕೃಷ್ಣ ಜನ್ಮಷ್ಟಮಿಯಂದು ಸಾರ್ವಜನಿಕ ಆಟೋಟ ಸ್ಪರ್ದೆಗಳನ್ನು ನಡೆಸಿಕೊಂಡು ಬಂದಿದೆ. ಇದೀಗ ಮಂದಿರಕ್ಕೆ ಬ್ರಹ್ಮಕಲಶ ನಡೆದು 12 ವರ್ಷ ಕಳೆದಿದ್ದು ಸಾನಿಧ್ಯವೃದ್ದಿಗೆ ಹಾಗೂ ಭಕ್ತರ ಅನುಕೂಲಕ್ಕಾಗಿ ಸುಮಾರು 80 ಲಕ್ಷದ ಅಂದಾಜಿನ ವಿವಿದ ಕಾಮಗಾರಿಗಳನ್ನು ಪೂರೈಸಿಕೊಂಡು ಡಿ. 23 ರಿಂದ ಡಿ. 25 ರವರೆಗೆ ವಿವಿಧ ವೈದಿಕ, ತಾಂತ್ರಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಕ್ಮಕಲಶೋತ್ಸವ ನಡೆಯಲಿದೆ.

ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ಅಯ್ಯಪ್ಪ ಸ್ವಾಮಿ ಸೇವಾ ಟ್ರಷ್ಟ್ ನ ಅಧ್ಯಕ್ಷ ರಾಜೇಂದ್ರ ನಾಯರ್, ಬ್ರಹ್ಮಕಲಶೋತ್ಸವ ಸಮಿತಿ ಗೌರವಧ್ಯಕ್ಷ ಸಂಪತ್ ಬಿ. ಸುವರ್ಣ, ಬ್ರಹ್ಮಕಲಶೋತ್ಸವ ಸಮಿತಿ ಅದ್ಯಕ್ಷ ನಿತ್ಯಾನಂದ ಕರ್ನಂತೋಡಿ, ಪ್ರಧಾನ ಕಾರ್ಯದರ್ಶಿ ಚಿದಾನಂದ ಇಡ್ಯಾ, ಕೋಶಾಧಿಕಾರಿ ಪ್ರತಾಪ್ ನಾಯರ್, ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿಯ ಅಧ್ಯಕ್ಷರಾದ ಮೋಹನ್ ಕುಲಾಲ್ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

ಡಿ. 23 ರಂದು ಬೆಳಿಗ್ಗೆ ದೇವತಾಪ್ರಾರ್ಥನೆ, ಸ್ಥಳಶುದ್ಧಿ, ಪಂಚಗವ್ಯ, ತೋರಣ ಮುಹೂರ್ತ, ಪುಣ್ಯಾಹವಾಚನ, ದ್ವಾದಶ ನಾಳಿಕೇರ ಗಣಯಾಗ, ಉಗ್ರಾಣ ಮುಹೂರ್ತ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ವಾಸ್ತು ಹೋಮ, ವಾಸ್ತುಬಲಿ ದಿಕ್ಪಾಲಬಲಿ, ಪ್ರಾಸಾದ ಶುದ್ಧಿ, ಫಲಾಹಾರ ನಡೆಯಲಿದೆ.

ಡಿ. 24 ರಂದು ಬೆಳಿಗ್ಗೆ ಪುಣ್ಯಾಹವಾಚನ, ನವ ಶಾಂತಿ ಹೋಮ ಶ್ರೀ ನಾಗದೇವರ ಸನ್ನಿಧಿಯಲ್ಲಿ ನವಕ ಕಲಶ ಪ್ರಧಾನ ಹೋಮ, ಆಶ್ಲೇಷಾಬಲಿ, ಪಂಚಾಮೃತಾಭಿಷೇಕ, ಕಲಶಾಭಿಷೇಕ, ಪ್ರಸನ್ನ ಪೂಜೆ ತಂಬಿಲ, ಮಹಮ್ಮಾಯಿ ಅಮ್ಮನವರ ಪರ್ವರಾಧನೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಸುದರ್ಶನ ಹೋಮ, ರಾಕ್ಷೆಘ್ನ ಹೋಮ, ಕಲಶ ಮಂಡಲ ಪೂಜೆ, ದುರ್ಗಾಪೂಜೆ. ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.

ಡಿ.25 ರಂದು ಬೆಳಿಗ್ಗೆ ಪುಣ್ಯಾಹವಾಚನ, ಕಲಶಪೂಜೆ, ಪ್ರಧಾನಹೋಮ, ಗಣಹೋಮ, ಬೆಳಿಗ್ಗೆ 10.11 ಕ್ಕೆ ಅಯ್ಯಪ್ಪ ಸ್ವಾಮಿ ಪುನರ್ ಪ್ರತಿಷ್ಠೆ ಬ್ರಹ್ಮಕಲಶ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಶ್ರೀ ಸತ್ಯನಾರಾಯಣ ಪೂಜೆ, ದೈವಗಳಿಗೆ ಪರ್ವ, ಪಾಲೆಕೊಂಬು ಮೆರವಣಿಗೆ, ರಾತ್ರಿ ಮಂಡಲಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 12.00 ಕ್ಕೆ ತನ್ನೀರಪ್ಪ ಸೇವೆ, ರಾತ್ರಿ 1. 30 ಕ್ಕೆ ದೇವಿ ದರ್ಶನ, ಪ್ರಾತಃಕಾಲ ಕೆಂಡಸೇವೆ, ಶ್ರೀ ಅಯ್ಯಪ್ಪ ವಾವರ ಯುದ್ಧ, ಸುಬ್ರಹ್ಮಣ್ಯ ದರ್ಶನ, ಪ್ರಸಾದ ವಿತರಣೆ ನಡೆಯಲಿರುವುದು.

ಡಿ. 25 ರಂದು ಸಂಜೆ ಪಾಲಕೊಂಬು ಮೆರವಣಿಗೆ ಭಜನಾ ತಂಡ, ವಿವಿಧ ವೇಶ ಭೂಷಣಗಳೊಂದಿಗೆ ವೈಭವದ ಮೆರವಣಿಗೆ.

ವಿಶೇಷ ಆಕರ್ಷಣೆ ಚೆಂಡೆ-ಪಯ್ಯನ್ನೂರು ಮಹಾದೇವ್ ಗ್ರಾಮ ವಾದ್ಯ ಸಂಘಂ, ಉಡುಕು ಪಾಟ್ ಹರಿಶ್ರೀ ಶಾಸ್ತಾಂ ಚಾಲಕ್ಕುಡಿ, ತ್ರಿಶ್ಶೂರು. ರಾತ್ರಿ ಶ್ರೀ ಆದಿ ಧೂಮಾವತಿ ಶ್ರೀ ದೇಯಿಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಶಬರಿಮಲೆ ಅಯ್ಯಪ್ಪ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಡಿ.23 ರಂದು ಸಂಜೆ ವಿವಿಧ ಭಜನಾ ತಂಡಗಳೊಂದಿಗೆ ಹೊರಕಾಣಿಕೆ ಮೆರವಣಿಗೆ, ಸಂಜೆ 6 ಗಂಟೆಯಿಂದ ಗುರುವಾಯನಕೆರೆ ಶ್ರೀ ವೇದವ್ಯಾಸ ಶಿಶು ಮಂದಿರದ ಪುಟಾಣಿ ಮಕ್ಕಳು ಮತ್ತು ಹಳೆ ವಿದ್ಯಾರ್ಥಿಗಳಿಂದ, ಸ್ಥಳೀಯ ಮಕ್ಕಳಿಂದ ನೃತ್ಯ ವೈಭವ, ರಾತ್ರಿ 8 ಗಂಟೆಯಿಂದ ಶಾರಾದ ಆರ್ಟ್ಸ್ ತಂಡದ ಐಸಿರಿ ಕಲಾವಿದರು ಮಂಜೇಶ್ವರ ಅಭಿನಯಿಸಿದ ಕಲ್ಜಿಗದ ಮಾಯ್ಕರೆ ಪಂಜುರ್ಲಿ ತುಳು ಪೌರಾಣಿಕ ಮತ್ತು ಭಕ್ತಿ ಪ್ರಧಾನ ಸಾಮಾಜಿಕ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಡಿ. 24 ರಂದು ಸಂಜೆ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಬರೋಡ ವಹಿಸಲಿದ್ದಾರೆ. ಸಾಮರಸ್ಯ ಗತಿವಿದಿ ಮಂಗಳೂರು ವಿಭಾಗದ ವಿಭಾಗ ಸಹ ಸಂಯೋಜಕ ಶಿವಪ್ರಸಾದ್ ಮಲೆಬೆಟ್ಟು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.

ವಿಶೇಷ ಅತಿಥಿಯಾಗಿ ಕಿರುತೆರೆ ನಟ ಅರವಿಂದ ಬೋಳಾರ್ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ನ ಕನಸಿನ ಮನೆ ಮೋಹನ್ ಕುಮಾರ್, ಗುರುವಾಯನಕೆರೆ ವೈಭವ್ ಹಾರ್ಡ್ವೇರ್ನ ಮಾಲಕ ಸೀತಾರಾಮ ಶೆಟ್ಟಿ, ಕುವೆಟ್ಟು ಗ್ರಾ.ಪಂ. ಅಧ್ಯಕ್ಷೆ ಭಾರತಿ ಎಸ್. ಶೆಟ್ಟಿ, ಶೇಖರ್ ಶೆಟ್ಟಿ ಭಾಗವಹಿಸಲಿದ್ದಾರೆ.

ಗುರುವಾಯನಕೆರೆ ಡಾ| ವೇಣುಗೋಪಾಲ ಶರ್ಮರವರಿಗೆ ಗೌರವ ಸನ್ಮಾನ ನಡೆಯಲಿದೆ. ಬೆಳಿಗ್ಗೆ ವಿವಿಧ ಭಜನಾ ತಂಡಗಳಿಂದ ನೃತ್ಯ ಭಜನೆ, ಸಂಜೆ ಮಕ್ಕಳಿಂದ ನೃತ್ಯ ವೈಭವ, ರಾತ್ರಿ ಎಕ್ಸೆಲ್ ಪ. ಪೂ. ಕಾಲೇಜಿನ ವಿದ್ಯಾರ್ಥಿಗಳಿಂದ ಎಕ್ಸೆಲ್ ಕಲಾ ವೈಭವ, ರಾತ್ರಿ ಊರವರಿಂದ ನೃತ್ಯ ವೈಭವ ನಡೆಯಲಿರುವುದು.

Exit mobile version