Site icon Suddi Belthangady

ಉಜಿರೆ: ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಕ್ರಿಸ್ ಮಸ್ ಹಬ್ಬದ ಆಚರಣೆ

ಉಜಿರೆ: ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಡಿ. 14 ರಂದು ಕ್ರಿಸ್ ಮಸ್ ಹಬ್ಬವನ್ನು ಸಂಘದ ಬೆಳ್ತಂಗಡಿ ಶಾಖಾ ಸಭಾ ಭವನದಲ್ಲಿ ವರ್ಣರಂಜಿತವಾಗಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಸಂಘದ ಅದ್ಯಕ್ಷರು ದೀಪ ಬೆಳಗಿಸಿ ಉದ್ಘಾಟಿಸಿದರು. ಅದ್ಯಕ್ಷರು ತಮ್ಮ ಸಂದೇಶದಲ್ಲಿ ಸಂಘವು ಪ್ರತೀ ವರ್ಷ ಕ್ರಿಸ್ ಮಸ್ ಆಚರಣೆಯನ್ನು ನಡೆಸುತ್ತಾ ಬಂದಿದೆ. ಯೇಸುಕ್ರಿಸ್ತರು ಮಾತೆ ಮರಿಯಳ ಪವಿತ್ರಗರ್ಭಧಲ್ಲಿ ಜನಿಸುವುದರೊಂದಿಗೆ ದುಷ್ಟ ಶಕ್ತಿಗಳ ವಿರುದ್ದ ಮಾನವ ಕುಲಕ್ಕೆ ಅತೀದೊಡ್ಡ ಶಕ್ತಿಯಾಗಿ ಪ್ರಜ್ವಲಿಸಿದರು.

ತಮ್ಮ ಜೀವಿತಾವಧಿಯಲ್ಲಿ ಏಸುಕ್ರಿಸ್ತರು ದೀನದಲಿತರೊಂದಿಗೆ ಬೆರೆತರು. ಅವರು ರೋಗಿಗಳನ್ನು ಗುಣಪಡಿಸಿದರು, ಶೋಷಣೆಯ ವಿರುದ್ದ ಮಾತನಾಡಿದರು, ಮನುಕುಲದ ಪಾಪಗಳನ್ನು ತನ್ನ ಜೀವವನ್ನೇ ಬಲಿದಾನ ಮಾಡುವ ಮೂಲಕ ಕ್ಷಮಿಸಿದರು. ಪ್ರಭು ಯೇಸುಕ್ರಿಸ್ತರ ಜನ್ಮ ದಿನವನ್ನು ನಾವೆಲ್ಲರೂ ಡಿ. 25 ರಂದು ಪ್ರಪಂಚ್ಯದಾದ್ಯಂತ ಆಚರಿಸುತ್ತೇವೆ.

ಕ್ರಿಸ್ ಮಸ್ ಹಬ್ಬವು ಸರ್ವರಿಗೂ ಶಾಂತಿ, ಸಹಬಾಳ್ವೆ ಮತ್ತು ನೆಮ್ಮದಿಯ ಬದುಕನ್ನು ಕಲ್ಪಿಸಿಕೊಡಲಿ ಎಂದು ಎಲ್ಲರಿಗೂ ಕ್ರಿಸ್ ಮಸ್ ಹಬ್ಬದ ಶುಭಾಶಯವನ್ನು ಕೋರಿದರು.

ಉಪಾಧ್ಯಕ್ಷ ಅನಿಲ್ ಪ್ರಕಾಶ್ ಡಿಸೋಜ ಕ್ರಿಸ್ ಮಸ್ ಹಬ್ಬದ ಶುಭಾಶಯವನ್ನು ಕೋರಿದರು. ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚಲಾಯಿತು. ನಿರ್ದೇಶಕರು ಮತ್ತು ಸಂಘದ ಸಿಬ್ಬಂದಿ ವರ್ಗದವರು ವಿವಿಧ ಭಾಷೆಯಲ್ಲಿ ಕ್ರಿಸ್ ಮಸ್ ಕ್ಯಾರೆಲ್ಸ್ ಗೀತೆಗಳನ್ನು ಹಾಡಿದರು. ಪ್ರಧಾನ ಕಚೇರಿಯ ವ್ಯವಸ್ಥಾಪಕ ಪ್ರವೀಣ್ ಪಿಂಟೊ ಮತ್ತು ಮೆಲಿಟ ಪಾಯ್ಸ್ ಇವರು ನಡೆಸಿಕೊಟ್ಟ ವಿವಿಧ ಹಾಸ್ಯಮಯ ವಿನೋದ ಸ್ಪರ್ದೆಗಳಲ್ಲಿ ಸಂಘದ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದರು. ವಿಜೇತರಿಗೆ ಉಪಾದ್ಯಕ್ಷರು ಬಹುಮಾನಗಳನ್ನು ವಿತರಿಸಿದರು.

ಸಂಘದ ಅಧ್ಯಕ್ಷರು ಪ್ರತಿಯೊಬ್ಬರಿಗೂ ಕ್ರಿಸ್ ಮಸ್ ಉಡುಗೊರೆಗಳನ್ನು ವಿತರಿಸಿದರು. ಷ ಸಿಬ್ಬಂದಿ ವಿಲ್ಸನ್‌ ಟೆಲ್ಲಿಸ್‌ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾದಿಕಾರಿ ವಿಲ್ಸನ್ ನೆಲ್ಸನ್ ಮೋನಿಸ್ ನಿರೂಪಿಸಿದರು. ವಿನೋಲ್ ಕ್ರಾಸ್ತ ಧನ್ಯವಾದವಿತ್ತರು.

Exit mobile version