Site icon Suddi Belthangady

ವಕೀಲರ ಸಂಘದಿಂದ ಕ್ರಿಸ್ ಮಸ್ ಹಬ್ಬ ಆಚರಣೆ

ಬೆಳ್ತಂಗಡಿ: ವಕೀಲರ ಸಂಘ ಹಾಗೂ ಯುವ ವಕೀಲರ ವೇದಿಕೆ ವತಿಯಿಂದ ವಕೀಲರ ಭವನದಲ್ಲಿ ಡಿ. 17 ರಂದು ಕ್ರಿಸ್ ಮಸ್ ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಮನು ಬಿ. ಕೆ., ಪ್ರಧಾನ ನ್ಯಾಯಾಧೀಶ ಸಂದೇಶ್ ಕೆ., ಹೆಚ್ಚುವರಿ ನ್ಯಾಯಾಧೀಶ ವಿಜಯೇಂದ್ರ ಟಿ. ಎಚ್. ಉಪಸ್ಥಿತರಿದ್ದರು.

ಗೌರವ ಅಥಿತಿಗಳಾಗಿ ಮಂಗಳೂರಿನ ಹಿರಿಯ ನ್ಯಾಯವಾದಿ ಎಂ. ಪಿ. ನೋರೋನ್ಹ ಕ್ರಿಸ್ ಮಸ್ ಹಬ್ಬದ ಸಂದೇಶವನ್ನು ಸಾರಿದರು. ಈ ಸಂದರ್ಭದಲ್ಲಿ ಈ ಹಬ್ಬವು ಶಾಂತಿಯ ಸಂಕೇತವಾಗಿದೆ, ಇಂತಹ ಆಚರಣೆಯನ್ನು ಹಮ್ಮಿಕೊಂಡ ಬೆಳ್ತಂಗಡಿ ವಕೀಲರ ಸಂಘವನ್ನು ಅಭಿನಂದಿಸಿ ಈ ಸಂಘವು ಸಮಾಜಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.

ಅಧ್ಯಕ್ಷರ ನೆಲೆಯಲ್ಲಿ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ ಮಾತನಾಡಿದರು. ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಕೀಲ ಫಾದರ್ ವಿನೋದ್ ಮಸ್ಕರೆನ್ಹಸ್ ರವರನ್ನು ಸನ್ಮಾನಿಸಲಾಯಿತು.

ಸೆಲ್ಫಿ ವಿತ್ ಸಾಂತಾ ಕ್ಲಾಸ್, ಲಕ್ಕಿ ಪರ್ಸನ್ ಆಫ್ ದಿ ಇಯರ್, ಲಕ್ಕಿ ಚೇರ್ ನ್ನು ಅಜೋಜಿಸಲಾಗಿತ್ತು. ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ವಿಶೇಷ ಆಕರ್ಷಣೆಯಾಗಿ ಸಾಂತ ಕ್ಲಾಸ್ ( ಸುಶಾಂತ್ ) ಹಬ್ಬದ ಮೆರುಗನ್ನು ಹೆಚ್ಚಿಸಿದರು.

ಈ ಸಂದರ್ಭದಲ್ಲಿ ಯುವಕೀಲರ ವೇದಿಕೆ ಅಧ್ಯಕ್ಷ ಸಂದೀಪ್ ಡಿಸೋಜ ಉಪಸ್ಥಿತರಿದ್ದರು. ಸಮಿತಿಯ ಅಧ್ಯಕ್ಷ ಅಲೋಶಿಯಸ್ ಎಸ್. ಲೋಬೊ ಸ್ವಾಗತಿಸಿದರು. ಈ ಕಾರ್ಯಕ್ರಮವನ್ನು ಹಿರಿಯ ವಕೀಲರಾದ ಸೇವಿಯರ್ ಪಾಲೇಲಿ ಹಾಗೂ ಜೋಸ್ನಾ ವೇಲೋನ ಕೊರೆಯ ನಿರೂಪಿಸಿದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಬಿ. ಕೆ. ನೆರೆದಿದ್ದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.

Exit mobile version