Site icon Suddi Belthangady

ಬೆಳ್ತಂಗಡಿ: ಚಾರ್ಮಾಡಿಯ ಮುಹಿದ್ದಿನ್ ಜುಮ್ಮಾ ಮಸೀದಿ ಧರ್ಮಗುರುವಿನ ಮೇಲೆ ಹಲ್ಲೆ

ಬೆಳ್ತಂಗಡಿ: ಕ್ಷುಲ್ಲಕ ವಿಚಾರದಲ್ಲಿ ಚಾರ್ಮಾಡಿಯ ಮುಹಿದ್ದಿನ್ ಜುಮ್ಮಾ ಮಸೀದಿ ಧರ್ಮಗುರುವಿನ ಮೇಲೆ ಸುಮಾರು 12 ಜನರ ತಂಡದಿಂದ ಮಸೀದಿಗೆ ಮಂಗಳವಾರ ರಾತ್ರಿ ನುಗ್ಗಿ ಹಲ್ಲೆ ಮಾಡಿದ್ದು, ಗಾಯಗೊಂಡ ಧರ್ಮಗುರು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಾರ್ಮಾಡಿ ಗ್ರಾಮದ ಮುಹಿದ್ದಿನ್ ಜುಮ್ಮಾ ಮಸೀದಿ ಜಾಲಲಿನಗರದ ಧರ್ಮಗುರು ಶಮೀರ್ ಮುಸ್ಲಿಯಾರ್ (37 ವ) ಎಂಬವರಿಗೆ ಸ್ಥಳೀಯರಾದ ಬದ್ರುದ್ದಿನ್,ಸಂಶುದ್ದಿನ್, ಅಹಮದ್ ಟಿಬಿ ರೋಡ್, ನೌಫಲ್ ,ಅನ್ಸರ್, ಮುನೀರ್ ಅಸೀಫ್, ಅಫೀಝ್,ಅಫ್ರೀಜ್, ಶರೀಫ್,ಅಬ್ದುಲ್ ಖಾದರ್ ಮತ್ತಿತರರು ಮಸೀದಿಗೆ ನುಗ್ಗಿ ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ.
ಹಲ್ಲೆ ಬಳಿಕ ಮಸೀದಿ ಆವರಣದಲ್ಲಿ ಹಲ್ಲೆ ಮಾಡಿದ ತಂಡದವರು ಮತ್ತು ಮಸೀದಿಯವರ ಜತೆ ಗಲಾಟೆ ನಡೆದಿದ್ದು, ಈ ಘಟನೆಯ ಬಗ್ಗೆ ವಿಡಿಯೋ ವೈರಲ್ ಅಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಧರ್ಮಗುರು ದೂರು ನೀಡಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Exit mobile version