Site icon Suddi Belthangady

ಮರಿಪಾದೆ ಗರಡಿಗೆ ದಿ. ನಿರಂಜನ್ ಭಾವಂತಬೆಟ್ಟುರವರ ಕೊಡುಗೆ ಅಪಾರ – ರಕ್ಷಿತ್ ಶಿವರಾಮ್

ಕರಾಯ: ಶ್ರೀ ಬ್ರಹ್ಮ ಭೈದರ್ಕಳ ನೇಮೋತ್ಸವ ಕಾರ್ಯಕ್ರಮವು ಗರಡಿ, ಮರಿಪ್ಪಾದೆ, ಬಾವಂತಬೆಟ್ಟುವಿನಲ್ಲಿ ನಡೆಯಿತು. ಈ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕೆ. ಪಿ. ಸಿ. ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಭಾಗವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಮರಿಪಾದೆ ಗರಡಿಗೆ ದಿವಂಗತ ನಿರಂಜನ್ ಭಾವಂತಬೆಟ್ಟುರವರ ಕೊಡುಗೆಯನ್ನು ನೆನಪಿಸಿಕೊಂಡರು.

ಈ ಕಾರ್ಯಕ್ರಮದಲ್ಲಿ ಕೆ. ಪಿ. ಸಿ. ಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ, ತಣ್ಣೀರುಪಂತ ಗ್ರಾಮ ಪಂಚಾಯತ್ ಸದಸ್ಯ ಜಯ ವಿಕ್ರಂ ಕಲ್ಲಾಪು, ಧನಂಜಯ ವಕೀಲರು, ಬೆಂಗಳೂರಿನ ಉದ್ಯಮಿ ವಿಕಾಸ್ ಜೈನ್, ಅಧ್ಯಕ್ಷ ರತನ್ ಕುಮಾರ್ ಜೈನ್ ಹಾಗೂ ಇತರ ಪ್ರಮುಖರು ಭಾಗವಹಿಸಿದರು.

ಈ ಸಂದರ್ಭದಲ್ಲಿ ಅಜಿತ್ ಅಲ್ಲೆಜಿರವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.

Exit mobile version