Site icon Suddi Belthangady

ಎಸ್‌. ಡಿ. ಪಿ. ಐ ಕಕ್ಕೇಜಾಲ್ ಬ್ರಾಂಚ್ ವತಿಯಿಂದ ರಕ್ತದಾನ ಶಿಬಿರ

ಉಜಿರೆ: ಡಿ. 15 ರಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಗಾಂಧಿನಗರ (ಕಕ್ಕೇಜಾಲ್ ) ಬ್ರಾಂಚ್ ಸಮಿತಿ ವತಿಯಿಂದ ಮರ್ಹೂಂ ಹೈದರ್ ನೀರ್ಸಾಲ್ ಚಾರಿಟೇಬಲ್ ಟ್ರಸ್ಟ್ ಬ್ಲಡ್ ಡೋನರ್ಸ್ ಫಾರಂ ಬೆಳ್ತಂಗಡಿ ಇದರ ಜಂಟಿ ಆಶ್ರಯದಲ್ಲಿ ಎ. ಜೆ. ಆಸ್ಪತ್ರೆ ಮಂಗಳೂರು ಇದರ ಸಹಯೋಗದದೊಂದಿಗೆ ಮರ್ಹೂಂ ಹೈದರ್ ನೀರ್ಸಾಲ್, ಸಾಹುಲ್ ಹಮೀದ್ ಹಾಗೂ ಅಲ್ತಾಫ್ ವಾಫಿರ್ ಸ್ಮರಣಾರ್ಥ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ ಗಾಂಧಿನಗರ ವಠಾರದಲ್ಲಿ ಕಕ್ಕೇಜಾಲ್ ಬ್ರಾಂಚ್ ಸಮಿತಿ ಅಧ್ಯಕ್ಷ ಇರ್ಫಾನ್ ಕಕ್ಕೆಜಲ್ ನೇತೃತ್ವದಲ್ಲಿ ನಡೆಯಿತು.

ರಕ್ತದಾನ ಶಿಬಿರ ಉದ್ಘಾಟಿಸಿ ಎಸ್‌. ಡಿ. ಪಿ. ಐ ಬೆಳ್ತಂಗಡಿ ಕ್ಷೇತ್ರಾಧ್ಯಕ್ಷ ಅಕ್ಬರ್ ಬೆಳ್ತಂಗಡಿ ಮಾತನಾಡಿದರು. ಎ. ಜೆ. ಆಸ್ಪತ್ರೆಯ ರಕ್ತನಿಧಿಯ ಸಂಯೋಜಕರು ಹಾಗೂ ವೈದ್ಯರು ಆದಂತಹ ಗೋಪಾಲ ಕೃಷ್ಣ, ಶ್ರೀ ಗುರುದೇವ ಕಾಲೇಜಿನ ಸಹಪ್ರಾಂಶುಪಾಲ ಸಮಿಉಲ್ಲಾ ಮಾಸ್ಟರ್ ಕಾರ್ಯಕ್ರಮವನ್ನು ಉದ್ದೇಶಿಸಿ ಅತಿಥಿ ಮಾತುಗಳನ್ನಾಡಿದರು.

ಎಸ್‌. ಡಿ. ಪಿ. ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯರು ನವಾಜ್ ಶರೀಫ್ ಕಟ್ಟೆ ಕಾರ್ಯಕ್ರಮದ ಕುರಿತು ಮುಖ್ಯ ಭಾಷಣ ಮಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಖಲೀಫಾ ಜುಮಾ ಮಸೀದಿ ಗಾಂಧಿನಗರದ ಅಧ್ಯಕ್ಷ ಅಕ್ಬರಲಿ, ಗಲ್ಫ್ ಘಟಕದ ಅಧ್ಯಕ್ಷ ಎ. ಬಿ. ಟಿ ಇಸ್ಮಾಯಿಲ್, ಎಸ್‌. ಡಿ. ಪಿ. ಐ ಉಜಿರೆ ಬ್ಲಾಕ್ ಅಧ್ಯಕ್ಷ ಮಹಮ್ಮದ್ ಅಲಿ, ಉಜಿರೆ ಬ್ಲಾಕ್ ಉಪಾಧ್ಯಕ್ಷ ಫಜಲ್ ರೆಹಮಾನ್, ಸರ್ವಾನ್ ಕಕ್ಕೆಜಾಲ್, ಮರ್ಹೂಂ ಹೈದರ್ ನೀರ್ಸಾಲ್ ಚಾರಿಟೇಬಲ್ ಟ್ರಸ್ಟ್ ಬ್ಲಡ್ ಡೋನರ್ಸ್ ಫಾರಂ ಬೆಳ್ತಂಗಡಿ ಇದರ ಸಂಯೋಜಕ ಸಲೀಂ ಮುರ ಹಾಗೂ ಊರಿನ ನಾಗರಿಕರು ಇತರರು ಉಪಸ್ಥಿತರಿದ್ದರು.

ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕ್ತದಾನ ಮಾಡಿದರು. ಸಿನಾನ್ ಸ್ವಾಗತಿಸಿ, ಮರ್ಷಾದ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು. ಆತಿಶ್ ವಂದಿಸಿದರು.

Exit mobile version