ರಝಾನಗರ: ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ನ 9 ನೇ ತರಗತಿಯ ಮುಹಮ್ಮದ್ ಸಾಬಿಕ್ ಮತ್ತು 8 ನೇ ತರಗತಿಯಲ್ಲಿ ಕಲಿಯುತ್ತಿರುವ ರಿಹಾ ಫಾತಿಮಾ ತನ್ನ ಹುಟ್ಟು ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದ್ದಾರೆ. ಶಾಲೆಗೆ ಅಗತ್ಯವಾಗಿ ಬೇಕಾದ ಸೀಲೀಂಗ್ ಫ್ಯಾನ್ ಮತ್ತು ಗೋಡೆ ಗಡಿಯಾರ ನೀಡುವುದರ ಮೂಲಕ ಇಡೀ ಶಾಲೆಗೆ ಮಾದರಿಯಾಗಿದ್ದಾರೆ.
ಶಾಲಾ ಮುಖ್ಯ ಶಿಕ್ಷಕಿ ಈ ಕಾಣಿಕೆಯನ್ನು ಸ್ವೀಕರಿಸಿ ಆರ್ಶೀವದಿಸಿದ್ದಾರೆ. ದುಂದು ವೆಚ್ಚ ಮಾಡಿ ಹುಟ್ಟಿದ ದಿನವನ್ನು ಆಚರಿಸುವ ಈ ಕಾಲಘಟ್ಟದಲ್ಲಿ ಶಾಲಾ ಉದ್ಧಾರಕ್ಕೆ ಏನಾದರೂ ನೀಡಬೇಕು ಎಂಬ ಮನೋಭಾವ ಹೆಮ್ಮೆ ಪಡುವಂತಹದ್ದಾಗಿದೆ. ಮುಹಮ್ಮದ್ ಸಾಬಿಕ್ ದೂಮಳಿಕೆ ನಿವಾಸಿ ಮೊಹಮ್ಮದ್ ಇಮ್ರಾನ್ ಷಾ ಮತ್ತು ಶಂಶಾದ್ ಬಾನು ದಂಪತಿಯ ಏಕೈಕ ಪುತ್ರ. ರಿಹಾ ಫಾತಿಮಾ ಕಲಾ ಬಾಗಿಲಿನ ನಿವಾಸಿ ಅಬ್ದುಲ್ ಲತೀಫ್ ಮತ್ತು ಕೈರುನ್ನೀಸಾ ದಂಪತಿಯ ಪುತ್ರಿ. ಇವರ ಉದಾರ ಮನಸ್ಥಿತಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಶ್ಲಾಘಿಸಿದ್ದಾರೆ.