ಉಜಿರೆ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಅರೆಭಾಷೆ ಅಭಿಮಾನಿ ಬಳಗ ಬೆಳ್ತಂಗಡಿ ತಾಲೂಕು ವತಿಯಿಂದ ಅರೆಭಾಷೆ ದಿನಾಚರಣೆ ಕಾರ್ಯಕ್ರಮ ಡಿ. 15 ರಂದು ಉಜಿರೆಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಲೋಕೇಶ್ವರಿ ವಿನಯಚಂದ್ರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕಿಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ರಮೇಶ್ ಪೈಲಾರ್ ನೆರವೇರಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸುಳ್ಯ ಎನ್. ಎಂ. ಸಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಸಂಜೀವ ಕುತ್ಪಾಜೆ ಮಾತನಾಡುತ್ತ ಎಲ್ಲಾ ತಾಯಂದಿರು ತಮ್ಮ ತಮ್ಮ ಮನೆಯಲ್ಲಿ ಮಕ್ಕಳಿಗೆ ಅರೆಭಾಷೆಯನ್ನು ಕಲಿಸುತ್ತಾ ಬೆಳವಣಿಗೆ ಅಲ್ಲಿಂದ ಪ್ರಾರಂಭವಾಗಿ ಇಡೀ ಸಮಾಜವನ್ನು ಅರೆಭಾಷೆಯತ್ತ ಒಲವು ಬರುವ ಹಾಗೆ ಮಾಡಬೇಕು ಎಂದು ಹೇಳಿದರು.
ರಕ್ಷಾ ಪೆರ್ಮುದೆ ಪ್ರಾರ್ಥಿಸಿದರು. ಅರೆಭಾಷೆ ಅಭಿಮಾನಿ ಬಳಗದ ಕಾರ್ಯದರ್ಶಿ ಉಷಾ ಲಕ್ಷ್ಮಣ ಗೌಡ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸಾಧಕರಾದ ನಿವೃತ್ತ ಸೈನಿಕ ಮೋನಪ್ಪ ಗೌಡ ದೇರಜೆ (ಡಿ. ಎಂ. ಗೌಡ) ಉಜಿರೆ, ಉಜಿರೆ ಶ್ರೀ. ಧ. ಮಂ. ಶಾಲಾ ಶಿಕ್ಷಕಿ ವಿದ್ಯಾರತ್ನ ಪ್ರಶಸ್ತಿ ಪಡೆದ ರೇಷ್ಮಾ ಪುಷ್ಪಾಕರ, ರಾಜ್ಯ ಮಟ್ಟದ ಹ್ಯಾಂಡ್ ಬಾಲ್ ಆಟಗಾರ ಮಾ. ಸುಮನ್ ಪಿ. ಗೌಡ ಇವರನ್ನು ಸನ್ಮಾನಿಸಲಾಯಿತು.
ಶೀಲಾವತಿ ಧರ್ಮೇಂದ್ರ ಗೌಡ ಬೆಳಾಲು, ದಯಾಮಣಿ ರವೀಂದ್ರ ಗೌಡ ಪೆರ್ಮುದೆ ರೀನಾ ಸುಧೀರ್ ವಲಂಬ್ರ ಇವರು ಸನ್ಮಾನ ಪತ್ರ ವಾಚಿಸಿದರು. ಕ್ರೀಡಾಕೂಟದ ವಿಜೇತರಿಗೆ ಬಹುಮಾನ ಹಾಗೂ ನಿರೂಪನೆಯನ್ನು ಧರ್ಮೇಂದ್ರ ಗೌಡ ಫುಚ್ಚೆತ್ತಿಲು ಮಾಡಿದರು. ಜೊತೆ ಕಾರ್ಯದರ್ಶಿ ಹರ್ಷಲತಾ ವಂದಿಸಿದರು.