Site icon Suddi Belthangady

ಧರ್ಮಸ್ಥಳ: ಅಪರಿಚಿತ ಶವ ಪತ್ತೆ

ಧರ್ಮಸ್ಥಳ: ಈ ಬಾವಚಿತ್ರದಲ್ಲಿರುವ ಸುಮಾರು 40-45 ವರ್ಷ ಪ್ರಾಯದ ಅಪರಿಚಿತ ಗಂಡಸು ಡಿ. 12 ರಂದು ಧರ್ಮಸ್ಥಳದ ಮುಖ್ಯ ಧ್ವಾರದ ಬಳಿಯಿರುವ ಕೆ. ಎಸ್.‌ ಆರ್. ಟಿ. ಸಿ ಬಸ್ಸು ನಿಲ್ದಾಣದ ಬಳಿಯ ರಸ್ತೆಯ ಪುಟ್‌ ಬಾತ್‌ ನಲ್ಲಿ ಅಸ್ವಸ್ಥರಾಗಿ ಮಲಗಿದ್ದವರನ್ನು ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟು, ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಿಂದ ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯಲ್ಲಿದ್ದರು.

ಡಿ. 15 ರಂದು ಮಂಗಳೂರು ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಮೃತದೇಹವನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಶವಗಾರದಲ್ಲಿ ವಾರೀಸುದಾರರ ಪತ್ತೆಯ ಬಗ್ಗೆ ಇರಿಸಲಾಗಿದೆ. ಮೃತರ ವಾರೀಸುದಾರರು ಪತ್ತೆಯಾದಲ್ಲಿ ಧರ್ಮಸ್ಥಳ ಠಾಣೆ: 8277986447 ಮತ್ತು ಬೆಳ್ತಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕರು: 9480805336 ನಂಬರಿಗೆ ಮಾಹಿತಿ ನೀಡುವುದು.

Exit mobile version