Site icon Suddi Belthangady

ಮಹಮ್ಮಾಯಿ ಕಟ್ಟೆ ಫ್ರೆಂಡ್ಸ್ ಸೊಣಂದೂರು ಪಣಕಜೆ – ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ

ಮಾಲಾಡಿ: ಮಹಮ್ಮಾಯಿ ಕಟ್ಟೆ ಫ್ರೆಂಡ್ಸ್ ಸೊಣಂದೂರು ಪಣಕಜೆ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಅಸೋಸಿಯೇಷನ್ ಇದರ ಸಹಕಾರದೊಂದಿಗೆ 5 ನೇ ವರ್ಷದ 55 ಕೆ. ಜಿ ವಿಭಾಗದ ಪುರುಷರ ಅಂತರ್ ಜಿಲ್ಲಾ ಮಟ್ಟದ ಮುಕ್ತ ಕಬಡ್ಡಿ ಪಂದ್ಯಾಟ ಡಿ. 15 ರoದು ಸೋಣಂದೂರು ಶಾಲಾ ಸಮೀಪದ ಮೈದಾನದಲ್ಲಿ ಜರಗಿತು.

ಪಣಕಜೆ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷೆ ಲೀಲಾವತಿ ವಸಂತ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ, ನಮ್ಮ ತುಳುನಾಡಿನಲ್ಲಿ ನಡೆಯುವಂತ ಕಬಡ್ಡಿ ಪಂದ್ಯಾಟಕ್ಕೆ ನಮ್ಮೆಲ್ಲರ ಸಹಕಾರ ಪ್ರೋತ್ಸಾಹ ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಕಬಡ್ಡಿ ಆಡುವ ಮೂಲಕ ರಾಷ್ಟ್ರೀಯ ಮಟ್ಟಕ್ಕೆ ತೇರ್ಗಡೆ ಹೊಂದಬೇಕು ಎಂದು ಶುಭ ಹಾರೈಸಿದರು.

ಮಹಾಮ್ಮಾಯಿ ಕಟ್ಟೆ ಫ್ರೆಂಡ್ಸ್ ಇದರ ಅಧ್ಯಕ್ಷ ರಾಜೇಶ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ರಾಜರಾಮ ಶೆಟ್ಟಿ ಮುಂಡಾಡಿ ಗುತ್ತು ಕ್ರೀಡಾಂಗಣವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ನಿಯಾಜ್ ಪಣಕಜೆ, ಅನಿತಾ ರೇಷ್ಮಾ ಡಿ ಸೋಜ ಮುಖ್ಯೋಪಾಧ್ಯಾಯರು ಸೊಣಂದೂರು ಶಾಲೆ, ಜಗದೀಶ್ ಆಚಾರ್ಯ ಕಲ್ಲಾರಿ ಕಮ್ಯುನಿಕೇಶನ್ ಮಡಂತ್ಯಾರು, ಎಸ್. ಬೇಬಿ ಸುವರ್ಣ ಸದಸ್ಯರು ಗ್ರಾ. ಪಂಚಾಯತ್ ಮಾಲಾಡಿ, ಕೆ. ಡಿ. ಪಿ ಸದಸ್ಯರು ತಾ. ಪಂಚಾಯತ್ ಬೆಳ್ತಂಗಡಿ, ಉಪೇಂದ್ರ ಆಚಾರ್ಯ ಮುಂಡಾಡಿ ಪಣಕಜೆ, ರೋಶನ್ ಲೋಗೋ ಪಣಕಜೆ ಉದ್ಯಮಿ ಮಂಗಳೂರು ಆಗಮಿಸಿದ್ದರು.

ಈ ಸಂದರ್ಭದಲ್ಲಿ ರಾಜ್ಯಮಟ್ಟದ ವೈಟ್ ಲಿಫ್ಟಿಂಗ್ ನಲ್ಲಿ ದ್ವಿತೀಯ ಸ್ಥಾನ ಪಡೆದ ಸ್ಥಳೀಯ ಪ್ರತಿಭೆ ಸಂಗಮ್ ಜೆ. ಎಚ್ ಇವರನ್ನು ಸನ್ಮಾನಿಸಲಾಯಿತು.

ಮಹಾಮ್ಮಾಯಿ ಕಟ್ಟೆ ಫ್ರೆಂಡ್ಸ್ ಇದರ ಗೌರವಾಧ್ಯಕ್ಷ ಪ್ರಸಾದ್ ಪ್ರಭು, ಉಪಾಧ್ಯಕ್ಷ ಮೋಹನ್ ನಾಯ್ಕ್, ಕಾರ್ಯದರ್ಶಿ ದೀಪಕ್ ಕುಮಾರ್, ಜೊತೆ ಕಾರ್ಯದರ್ಶಿ ಪುನೀತ್, ಕೋಶಾಧಿಕಾರಿ ಸಚಿನ್, ಸುನಿಲ್, ಕೌರವ ಸಲಹೆಗಾರರಾದ ವೆಂಕಟೇಶ್ ಕುಲಾಲ್, ಸಂಜೀವ, ಪ್ರಕಾಶ್ ಪ್ರಭು, ಸುರೇಶ್, ಅರುಣ್ ಕುಲಾಲ್, ಸದಸ್ಯರಾದ ಯೋಗೀಶ್ ಆರ್, ಚೇತನ್ ಕುಮಾರ್, ದೀಕ್ಷಿತ್, ಅನಂತ ಆಚಾರ್ಯ, ಪ್ರತೀಕ್ ನಾಯಕ್, ಮನೋಜ್ ಕೋಟ್ಯಾನ್, ಆನಂದ ನಾಯ್ಕ್, ರಮೇಶ್ ಕುಲಾಲ್, ಚಂದ್ರಹಾಸ, ವೆಂಕಟೇಶ್, ಕಿಶನ್, ಸತೀಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಯೋಗಿ ಆರ್. ಸ್ವಾಗತಿಸಿ, ಹರೀಶ್ ನಾಯಕ್ ಪಣಕಜೆ ಕಾರ್ಯಕ್ರಮ ನಿರೂಪಿಸಿದರು. ಸಚಿನ್ ಧನ್ಯವಾದವಿತ್ತರು.

Exit mobile version