ಬೆಳ್ತಂಗಡಿ: ಬಿ. ಎಂ. ಎಸ್ ರಿಕ್ಷಾ ಚಾಲಕ ಸಂಘ ಇದರ ರಿಕ್ಷಾ ಚಾಲಕರ ಆಪತ್ಕಾಲದ ನೆರವಿನ ಯೋಜನೆಯ 25ನೇ ಸಹಾಯಧನವನ್ನು ಇತ್ತೀಚಿಗೆ ಮೃತರಾಗಿರುವ ಬಾಬು ಪೂಜಾರಿಯವರ ಪತ್ನಿ ಪ್ರೇಮ ಅವರಿಗೆ ರೂ.10,000 ವನ್ನು ಹಸ್ತಾಂತರಿಸಲಾಯಿತು.
ಈ ಸಹಾಯಧನವನ್ನು ಬಾಬು ಪೂಜಾರಿಯವರ ಹೆಸರಿನಲ್ಲಿ ಪೊಯ್ಯೆಗುಡ್ಡೆ ರಿಕ್ಷಾ ಚಾಲಕ ಸಂಘ ನಿರ್ಮಿಸಲು ಉದ್ದೇಶಿಸಿರುವ ಬಸ್ ಸ್ಟ್ಯಾಂಡಿಗೆ ಬಳಸಲು ಪೊಯ್ಯೆಗುಡ್ಡೆ ರಿಕ್ಷಾ ಚಾಲಕ ಸಂಘಕ್ಕೆ ಹಸ್ತಾಂತರಿಸಿರುತ್ತಾರೆ.
ಈ ಸಂದರ್ಭದಲ್ಲಿ ಬಿ. ಎಂ. ಎಸ್ ರಿಕ್ಷಾ ಚಾಲಕ ಸಂಘದ ಕೋಶಾಧಿಕಾರಿ ಪ್ರಶಾಂತ್ ಗರ್ಡಾಡಿ, ಪೊಯ್ಯೆಗುಡ್ಡೆ ರಿಕ್ಷಾ ಚಾಲಕ ಸಂಘದ ಅಧ್ಯಕ್ಷ ಸುಕೇಶ್ ಕುಮಾರ್, ಕಾರ್ಯದರ್ಶಿ ದಿನೇಶ್ ಶೆಟ್ಟಿ, ಕೋಶಾಧಿಕಾರಿ ಹರೀಶ್ ಮೂಲ್ಯ ಹಾಗೂ ಸದಸ್ಯರಾದ ಶಿವಪ್ಪ ಮೂಲ್ಯ ದಿನೇಶ್ ಪೂಜಾರಿ ಉಪಸ್ಥಿತರಿದ್ದರು.