Site icon Suddi Belthangady

ಬೆಳ್ತಂಗಡಿ: ಎಸ್‌. ಡಿ. ಪಿ. ಐ ವತಿಯಿಂದ ಸಾಮಾಜಿಕ ನ್ಯಾಯಕ್ಕಾಗಿ ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ-2

ಬೆಳ್ತಂಗಡಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಮಿತಿ ವತಿಯಿಂದ ಸಾಮಾಜಿಕ ನ್ಯಾಯಕ್ಕಾಗಿ ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ-2 ಡಿ. 4 ರಂದು ಸಂತೆಕಟ್ಟೆಯಿಂದ ಬೆಳ್ತಂಗಡಿ ಬಸ್ ನಿಲ್ದಾಣವೆರೆಗೆ ಕಾಲ್ನಡಿಗೆ ಜಾಥಾ ಹಾಗೂ ಸಭಾಕಾರ್ಯಕ್ರಮ ನಡೆಯಿತು.

ಕಲ್ಲೇರಿಯಲ್ಲಿ ಹೋರಾಟಗಾರರಿಗೆ ಸ್ವಾಗತ ಕಾರ್ಯಕ್ರಮ ನಡೆಯಿತು. ಕಲ್ಲೇರಿಯಿಂದ ಬೆಳ್ತಂಗಡಿವರೆಗೆ ಬೈಕ್ ಜಾಥ ನಡೆಯಿತು. ಕ್ಷೇತ್ರಾಧ್ಯಕ್ಷ ಅಕ್ಬರ್ ಬೆಳ್ತಂಗಡಿ ಸಮಿತಿ ವತಿಯಿಂದ ಹೋರಾಟಗಾರರಿಗೆ ಹೂಗುಚ್ಚ ನೀಡಿ ಸ್ವಾತಿಸಿದರು.

ಸಂತೆಕಟ್ಟೆಯಿಂದ ಬೆಳ್ತಂಗಡಿ ಬಸ್ ನಿಲ್ದಾಣದವರೆಗೆ ಕಾಲ್ನಡಿಗೆ ಜಾಥಾ ನಡೆಯಿತು. ಜಾಥಾ ಉದ್ದೇಶಿಸಿ ಎಸ್‌. ಡಿ. ಪಿ. ಐ ರಾಜ್ಯಾಧ್ಯಕ್ಷ ಮುಖ್ಯ ಭಾಷಣ ಮಾಡಿದರು. ಎಸ್‌. ಡಿ. ಪಿ. ಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಪೋನ್ಸ್ ಫ್ರಾಂಕೊ, ರಾಜ್ಯ ಪ್ರಧಾನ ಕಾರ್ಯದರ್ಶಿ, ಜಾಥಾ ಸಂಚಾಲಕ ಭಾಸ್ಕರ್ ಪ್ರಸಾದ್, ರಾಜ್ಯ ಕೋಶಾಧಿಕಾರಿ ಅಮ್ಜದ್ ಖಾನ್ ಜಾಥಾ ಉದ್ದೇಶಿಸಿ ಮಾತುಗಳನ್ನಾಡಿದರು.

ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆಫ್ಸರ್ ಕೊಡ್ಲಿಪೇಟೆ, ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು, ಜಾಥದ ಸಹ ಸಂಚಾಲಕ ರಂಜಾನ್ ಕಡಿವಾಳ, ಜಿಲ್ಲಾ ಅಧ್ಯಕ್ಷ ಅನ್ವರ್ ಸಾದತ್ ಬಜತ್ತೂರ್, ಜಿಲ್ಲಾ ಉಪಾಧ್ಯಕ್ಷ ಇನಾಸ್ ರೊಡ್ರಿಗಸ್, ಜಿಲ್ಲಾ ಸಮಿತಿ ಸದಸ್ಯರು ನವಾಜ್ ಷರೀಫ್ ಕಟ್ಟೆ, ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆ ಮಜಲು, ಅಬೂಬಕ್ಕರ್ ಮದ್ದ, ಅಶ್ರಫ್ ತಲಪಾಡಿ, ಕ್ಷೇತ್ರ ನಾಯಕರು, ಪಕ್ಷದ ಕಾರ್ಯಕರ್ತರು ಹಾಗೂ ಬೆಳ್ತಂಗಡಿಯ ನಾಗರೀಕರು ಉಪಸ್ಥಿತರಿದ್ದರು.

Exit mobile version