ಬೆಳ್ತಂಗಡಿ: ಭಾರತೀಯ ಪ್ರಧಾನಮಂತ್ರಿ ಜನಔಷದಿ ಕೇಂದ್ರ ಇದರ ನೂತನ ಕೇಂದ್ರವು ಪುಂಜಾಲಕಟ್ಟೆಯಲ್ಲಿ ಶುಭಾರಂಭಗೊಂಡಿತು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ ಉದ್ಘಾಟನೆ ನೆರವೇರಿಸಿ, ಮಾತನಾಡಿ ಪ್ರಧಾನಮಂತ್ರಿಗಳ ಕನಸಿನ ಯೋಜನೆ ನಮ್ಮ ಊರಿನಲ್ಲೂ ಸಾದರಗೊಂಡಿದೆ. ಅತ್ತ್ಯುತಮ ಗುಣಮಟ್ಟದ ಔಷಧಿಗಳು ಕಡಿಮೆ ದರದಲ್ಲಿ ದೊರೆಯುತ್ತಿದ್ದು, ಜನರು ಇದರ ಪ್ರಯೋಜನವನ್ನು ಹೆಚ್ಚಾಗಿ ಪಡೆಯುದರೊಂದಿಗೆ ಇತರರಿಗೂ ತಿಳಿಸಬೇಕೆಂದು ಆಶಿಸಿದರು. ಪ್ರಮುಖರಾದ ಜನಾರ್ಧನ ಪೂಜಾರಿ, ದಿನೇಶ ಪಾಂಗಾಳ, ಧನವತಿ ಹಾಗೂ ಕೇಂದ್ರದ ಸಿಬ್ಬಂದಿಗಳು ಸೇರಿ ದೀಪ ಪ್ರಜ್ವಲನೆ ಮಾಡಿದರು.
ಯುವ ನ್ಯಾಯವಾದಿ ತಾಜುದ್ದಿನ್ ಇವರು ಕೇಂದ್ರದಲ್ಲಿರುವ ಉಚಿತ ಇ. ಸಿ. ಜಿ. ಸೌಲಭ್ಯವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರಾಜಕೇಸರಿ ಸಂಘಟನೆಯ ದೀಪಕ್ ಜಿ. ಹಾಗೂ ರವಿ ನಾಯ್ಕ್, ಪುರುಷೋತ್ತಮ್ ವಾಮದಪದವು, ಬಂಟ್ವಾಳ ಕುಲಾಲ ಯುವ ವೇದಿಕೆಯ ಅಧ್ಯಕ್ಷ ನಿತೀಶ್ ಕುಲಾಲ್ ಪಲ್ಲಿಕಂಡ, ಸಿದ್ದಕಟ್ಟೆ ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಾಮಯ್ಯ ಬೊಟ್ಟುಮನೆ, ಪುತ್ತೂರು ಕುಂಬಾರ ಗುಡಿ ಕೈಗಾರಿಕಾ ಬ್ಯಾಂಕ್ ನ ಮಡಂತ್ಯಾರು ಶಾಖೆಯ ವ್ಯವಸ್ಥಾಪಕ ರಕ್ಷಿತ್ ಕಲಾಕುಂಜ ಉಪಸ್ಥಿತರಿದ್ದು, ಶುಭ ಹಾರೈಸಿದರು. ಜನಔಷಧಿ ಕೇಂದ್ರದ ಮಾಲಕ ಮನೋಜ್ ಕುಲಾಲ್ ಬಸಬೈಲು ಬಂದ ಅತಿಥಿಗಳನ್ನು ಸ್ವಾಗತಿಸಿ, ಗೌರವಿಸಿದರು.