Site icon Suddi Belthangady

“ವಿಂಶತಿ” ಸಂಭ್ರಮದ ಆಚರಣೆ – ಎಸ್. ಡಿ. ಎಂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಹಲವು ಬಹುಮಾನಗಳು

ಉಜಿರೆ: ಬೆಳ್ತಂಗಡಿಯ ವಾಣಿ ಪಿ. ಯು ಕಾಲೇಜಿನಲ್ಲಿ ಡಿ. 11 ರಂದು ನಡೆದ ” ವಿಂಶತಿ ” ಸಂಭ್ರಮದ ಆಚರಣೆ ಅಂಗವಾಗಿ ನಡೆದ ‘ ಉತ್ಕರ್ಷ 2024’. ಸಾಂಸ್ಕೃತಿಕ, ಶೈಕ್ಷಣಿಕ ಸ್ಪರ್ಧೆಯಲ್ಲಿ ಉಜಿರೆ ಎಸ್. ಡಿ. ಎಂ ಆಂಗ್ಲ ಮಾಧ್ಯಮ (ರಾಜ್ಯಪಠ್ಯಕ್ರಮ) ಶಾಲೆಯ ವಿದ್ಯಾರ್ಥಿಗಳು ಹಲವು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.

ನಿಧಿ ವಿಹಾರ ಸ್ಪರ್ಧೆಯಲ್ಲಿ ಸಂಜನ್ ಮತ್ತು ಪವಿಶ್ ಪ್ರಥಮ ಸ್ಥಾನ, ವರ್ತಿಕ (ವರದಿಗಾರಿಕೆ) ಸ್ಪರ್ಧೆಯಲ್ಲಿ ದಿಶಾನ್ ಮತ್ತು ಸಪ್ತಮಿ ಪ್ರಥಮ ಸ್ಥಾನ ಗಳಿಸಿದ್ದು, ಪ್ರವಲ್, ಸಮರ್ಥ್, ವಿಘ್ನೇಶ್, ಸಮರ್ಥ್ ಭಟ್ ಸುಪರ್ ಮಿನಿಟ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನವನ್ನು ಗೆದ್ದು ಕೊಂಡಿದ್ದಾರೆ. ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಅಕ್ಷರ್ ಮತ್ತು ಸಚಿತ್ ಭಟ್ ತೃತೀಯ ಸ್ಥಾನ, ಮತಿ-ಸ್ಮೃತಿ ಸ್ಪರ್ಧೆಯಲ್ಲಿ ಮಧುಶ್ರೀ ಮತ್ತು ದೀಪಿಕ ತೃತೀಯ ಸ್ಥಾನ ಗಳಿಸಿದ್ದಾರೆ. ವಿದ್ಯಾರ್ಥಿಗಳನ್ನು ಶಾಲಾ ಮುಖ್ಯೋಪಾಧ್ಯಾಯನಿ ವಿದ್ಯಾಲಕ್ಷ್ಮಿ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.

Exit mobile version