ಪಡಂಗಡಿ: ಡಿ. 21 ರಂದು ಬೆಳಿಗ್ಗೆ 8:30 ರಿಂದ ಮಡಂತ್ಯಾರು ಶ್ರೀವೇದಮೂರ್ತಿ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ದೇಮ್ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಗಣಹೋಮ, ರಾಹು ಗುಳಿಗ ದೈವ ಪ್ರತಿಷ್ಠೆ ಕಲಶಾಭಿಷೇಕ, ಪಂಚಪರ್ವ ಪೂಜೆ, ಅಯ್ಯಪ್ಪ ದೇವರಿಗೆ ಪ್ರಧಾನ ಹೋಮ, ಕಲಶ ಪೂಜೆ, ಕಲಶಾಭಿಷೇಕ ಮಧ್ಯಾಹ್ನ 12:30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆಯ ಸಂತರ್ಪಣೆ ನಡೆಯಲಿರುವುದು.
ಸಂಜೆ 7:00 ಗಂಟೆಗೆ ರಾಹುಗುಳಿಗನಿಗೆ ಎಣ್ಣೆ ಬೂಳ್ಯ, 7:00 ಕ್ಕೆ ಅಯ್ಯಪ್ಪ ಮಂದಿರದಲ್ಲಿ ಭಜನೆ, ಅಯ್ಯಪ್ಪ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ. ರಾತ್ರಿ 9.00 ಗಂಟೆಗೆ ಸರಿಯಾಗಿ ರಾಹುಗುಳಿಗನಿಗೆ ನೇಮೊತ್ಸವ ನಡೆಯಲಿರುವುದು.