Site icon Suddi Belthangady

ಬಳಂಜ: ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಕಾರ್ಯದರ್ಶಿ ಅನುಕ್ಷಾರಿಗೆ ವಾಣಿ ಕಾಲೇಜಿನಲ್ಲಿ ಸನ್ಮಾನ

ಬಳಂಜ: ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ವಾಣಿ ಪದವಿ ಪೂರ್ವ ಕಾಲೇಜು ಇದರ 20 ನೇ ವರ್ಷದ ಸಂಭ್ರಮಾಚರಣೆಯ ವಿಂಶತಿ ಕಾರ್ಯಕ್ರಮದಲ್ಲಿ ನಮ್ಮ ಬ್ರಹ್ಮಶ್ರೀ ಕುಣಿತ ಭಜನೆಯ ಹೆಮ್ಮೆಯ ಸದಸ್ಯೆ ಹಾಗೆಯೇ ಮಂಡಳಿಯ ಕಾರ್ಯದರ್ಶಿಯಾಗಿರುವ ಅನುಕ್ಷಾ, ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆ ಮತ್ತು ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಸೆ. 17 ರಿಂದ 23 ರ ವರೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತೆ 2024-25 ನೇ ಸಾಲಿನ ಶಿಬಿರದಲ್ಲಿ ಭಾಗವಹಿಸಿ ಪ್ರಹಸನ ವಿಭಾಗದಲ್ಲಿ ಸಮಾಧಾನಕರ ಬಹುಮಾನ ಮತ್ತು ಜಾನಪದ ಗಾಯನದಲ್ಲಿ ತೃತೀಯ ಬಹುಮಾನವನ್ನು ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿರುವುದರಿಂದ ಕಾಲೇಜು ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

Exit mobile version