Site icon Suddi Belthangady

ಕೊಕ್ಕಡದಲ್ಲಿ ಮನೆ ಮನೆ ಗಮಕ ಕಾರ್ಯಕ್ರಮ

ಕೊಕ್ಕಡ: ಡಾ. ದಿವಾರವರ ತಂದೆ ಗಂಗಯ್ಯ ಗೌಡರ ಮನೆ ಕಡೀರದಲ್ಲಿ ವಾರ್ಷಿಕ ಪೂಜಾ ಧಾರ್ಮಿಕ ಕಾರ್ಯಕ್ರಮಗಳ ಪ್ರಯುಕ್ತ ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ತಿನ ವತಿಯಿಂದ ಮನೆ ಮನೆ ಗಮಕ ವಾಚನ ವ್ಯಾಖ್ಯಾನದ ಹದಿಮೂರನೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕುಮಾರವ್ಯಾಸ ಭಾರತದ ಭೀಷ್ಮಪರ್ವದ ಆರನೇ ಸಂಧಿಯ ಭೀಷ್ಮಭಕ್ತಿ ಕಾವ್ಯವನ್ನು ಗಮಕ ರೂಪದಲ್ಲಿ ಪ್ರಸ್ತುತಪಡಿಸಲಾಯಿತು. ಉಜಿರೆಯ ಗಮಕ ವಿದ್ಯಾರ್ಥಿನಿ ಶ್ರೀವಿದ್ಯಾ ಐತಾಳ್ ವಾಚನವನ್ನು ನಡೆಸಿಕೊಟ್ಟರು. ವ್ಯಾಖ್ಯಾನದಲ್ಲಿ ತಾಲೂಕು ಪರಿಷತ್ತಿನ ಅಧ್ಯಕ್ಷ ರಾಮಕೃಷ್ಣ ಭಟ್ ಉಜಿರೆ ಸಹಕರಿಸಿ ಅರ್ಥಪೂರ್ಣವಾಗಿ ವಿವರಿಸಿದರು. ಡಾ. ದಿವಾ ಕೊಕ್ಕಡ ಎಲ್ಲರನ್ನೂ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗಂಗಯ್ಯ ಗೌಡ ಕಲಾವಿದರನ್ನು ಗೌರವಿಸಿದರು.

Exit mobile version