ಉಜಿರೆ: ಆಳ್ವಾಸ್ ಸೆಂಟ್ರಲ್ ಸ್ಕೂಲ್ ಮೂಡಬಿದರೆಯಲ್ಲಿ ಡಿ. 5 ರಂದು ಆಯೋಜಿಸಿದ್ದ ಸೈನ್ಸ್ ಸೊಸೈಟಿ ಆಫ್ ಇಂಡಿಯಾ (ಎಸ್.ಎಸ್.ಐ) ವತಿಯಿಂದ ಭಾರತೀಯ ವಿಜ್ಞಾನ ಮತ್ತು ಎಂಜಿನಿಯರಿಂಗ್ ಮೇಳ (ಐ.ಎನ್.ಎಸ್.ಇ.ಎಫ್) 2024-25 ಪ್ರಾದೇಶಿಕ ಮಟ್ಟದ ಸ್ಪರ್ಧೆಯಲ್ಲಿ 10 ನೇ ತರಗತಿಯ ಅಧೀಶ್ ಬಿ. ಸಿ ಮತ್ತು ಆಲಾಪ್ ಎಂ ಭಾಗವಹಿಸಿ ಚಿನ್ನದ ಪದಕವನ್ನು ಪಡೆದುಕೊಂಡು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮತ್ತು ಸೈನ್ಸ್ ಸೊಸೈಟಿ ಆಫ್ ಇಂಡಿಯಾದ ತೀರ್ಪುಗಾರ ನಾರಾಯಣ ಅಯ್ಯರ್ ಅಭಿನಂದಿಸಿದರು. “ಕೃಷಿ ತ್ಯಾಜ್ಯಗಳು ಮತ್ತು ಕಳೆಗಳಿಗೆ ಮೌಲ್ಯವರ್ಧನೆ” ಎಂಬ ಶೀರ್ಷಿಕೆಯ ಯೋಜನೆಯನ್ನು ಪ್ರಸ್ತುತ ಪಡಿಸಿದ್ದರು. ಶಿಕ್ಷಕಿ ಧನ್ಯವತಿ ಕೆ ಮಾರ್ಗದರ್ಶನ ನೀಡಿರುತ್ತಾರೆ.