ಕುದ್ಯಾಡಿ: ಇತಿಹಾಸ ಪ್ರಸಿದ್ಧ ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವವು ಜ. 8 ರಿಂದ 12 ರವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಜಣೆಯಿಂದ ನಡೆಯಲಿದ್ದು, ಆ ಪ್ರಯುಕ್ತ ಕುದ್ಯಾಡಿ ಪ್ರಗತಿ ಬಂದು ಒಕ್ಕೂಟದ ಸಭೆಯಲ್ಲಿ ಸದಾನಂದ ಪೂಜಾರಿ ಉಂಗಿಲಬೈಲು ಮಾಹಿತಿ ನೀಡಿದರು.
ಬ್ರಹ್ಮಕಲಶೋತ್ಸವಕ್ಕೆ ಸುಮಾರು ರೂ. 75 ಲಕ್ಷ ವೆಚ್ಚ ತಗಲಬಹುದೆಂದು ಅಂದಾಜಿಸಲಾಗಿದ್ದು. 501 ಕಲಶಾಭಿಷೇಕ, ಐದು ದಿನ ದೇವತಾ ಕೆಲಸ, ನಿರಂತರ ಅನ್ನದಾಸೋಹ ನಡೆಯಲಿದ್ದು ಗ್ರಾಮಸ್ಥರೆಲ್ಲ ಸಹಕರಿಸುವಂತೆ ವಿನಂತಿಸಿದರು.