Site icon Suddi Belthangady

ಪುದುವೆಟ್ಟು: ಮಿಯಾರು ಶ್ರೀ ನಾರಾಯಣಗುರು ಬಿಲ್ಲವ ಸಂಘ – 24 ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ

ಪುದುವೆಟ್ಟು: ಮಿಯಾರು ಶ್ರೀ ನಾರಾಯಣಗುರು ಬಿಲ್ಲವ ಸಂಘ (ಎಸ್.ಎನ್.ಡಿ.ಪಿ)24 ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವವು ವಾಸು ಗುರುಸ್ವಾಮಿ ಪಿಲಿಕಳ ಹಾಗೂ ಶ್ರೀ ಶಶಿ ಗುರುಸ್ವಾಮಿ ಕರಂಬಾರು ಇವರ ನೇತೃತ್ವದಲ್ಲಿ ಶ್ರೀ ನಾರಾಯಣಗುರು ಸಂಘದ ವಠಾರದಲ್ಲಿ ಡಿ. 14 ರಂದು ಸಂಜೆ 6 ರಿಂದ ನಡೆಯುವುದು ಬೆಳಿಗ್ಗೆ 7 ಗಂಟೆಗೆ ಗುರು ಪೂಜೆ ನಡೆದು, ಸಂಜೆ 6 ರಿಂದ ಪಾಲಕೊಂಬು ಮೆರವಣಿಗೆ,
ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ, ಚೆಂಡೆಮೇಳ, ಕುಣಿತ ಭಜನೆ ನಡೆಯಲಿದೆ.

ರಾತ್ರಿ ಗಂಟೆ 9-30 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ರಾತ್ರಿ ಗಂಟೆ 11 ರಿಂದ ಅಗ್ನಿ ಪ್ರತಿಷ್ಠೆ, ಅಪ್ಪಸೇವೆ, ದೇವಿ ಮೆರವಣಿಗೆ, ಕೆಂಡಸೇವೆ, ಅಯ್ಯಪ್ಪ ವಾವರ ದರ್ಶನ, ಸುಬ್ರಹ್ಮಣ್ಯ ಸ್ವಾಮಿ ದರ್ಶನ ನಂತರ ಬೆಳಿಗ್ಗೆ ಗಂಟೆ 6 ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲ್ಲಿದೆ.

Exit mobile version