ದಿಡುಪೆ: ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರು ಇದರ ಅಂಗ ಸಂಸ್ಥೆ ಮಸ್ಜಿದುಲ್ ಹಿದಾಯ ಇದರ ಮಹಾಸಭೆಯು ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರು ಅಧ್ಯಕ್ಷರಾದ ಕೆ. ಯು ಇಬ್ರಾಹಿಂ ಸಭಾಧ್ಯಕ್ಷತೆಯಲ್ಲಿ ದಿಡುಪೆ ಮದ್ರಸದಲ್ಲಿ ನಡೆಯಿತು.
ವೇದಿಕೆಯಲ್ಲಿ ದರ್ಗಾ ಶರೀಫ್ ಕಾಜೂರಿನ ಪ್ರದಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್ ಜೆ. ಹೆಚ್, ಕೋಶಾಧಿಕಾರಿ ಮೊಹಮ್ಮದ್ ಕಮಲ್, ಉಪಾಧ್ಯಕ್ಷ ಬದ್ರುದ್ದೀನ್, ಸದಸ್ಯರಾದ ಎನ್. ಎಮ್ ಯಾಕುಬ್, ಸಿದ್ದಿಕ್ ಕೆ. ಹೆಚ್, ಎ.ಯು ಮೊಹಮ್ಮದಲಿ, ಅಬ್ದುಲ್ ಖಾದರ್ ಉಪಸ್ಥಿತರಿದ್ದು, ಕಾರ್ಯದರ್ಶಿ ನಿಝಮ್ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ನಿಕಟಪೂರ್ವ ಅಧ್ಯಕ್ಷ ಡಿ.ಬಿ ಇಸ್ಮಾಯಿಲ್ ಮುಸ್ಲಿಯಾರ್ ಸ್ವಾಗತಿಸಿದರು.
ಸಭೆಯಲ್ಲಿ ಸರ್ವಾನುಮತದದೊಂದಿಗೆ ಈ ಕೆಳಕಂಡ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳು: ಅಧ್ಯಕ್ಷರು ಇದಿನಬ್ಬ ಅಡ್ಕ, ಉಪಾಧ್ಯಕ್ಷ ಅಬ್ದುಲ್ ಖಾದರ್ ಪಯ್ಯೇ, ಪ್ರ.ಕಾರ್ಯದರ್ಶಿ ಅಬೂಬಕ್ಕರ್ ಫೈಝಿ, ಜೊತೆ ಕಾರ್ಯದರ್ಶಿ ಇಸ್ಮಾಯಿಲ್ ಶಿರ್ಲಾ, ಕೋಶಾಧಿಕಾರಿ ಎನ್.ಎ ಅಬೂಬಕ್ಕರ್.
ಸದಸ್ಯರುಗಳು ಉಸ್ಮಾನ್ ಅಡ್ಕ, ಕಬೀರ್ ದಿಡುಪೆ, ಅಶ್ರಫ್ ಅಡ್ಕ, ಶರೀಫ್ ಪಯ್ಯೇ, ಅಬ್ದುಲ್ ರಹ್ಮನ್ ಬೆದ್ರಮಾರ್, ನಿಝಮುದ್ದೀನ್ ಅಜಲ್ ನೆಕ್ಕಿ. ಕೊನೆಯಲ್ಲಿ ಸಭಾಧ್ಯಕ್ಷ ಕೆ. ಯು. ಇಬ್ರಾಹಿಂ ಶುಭ ಹಾರೈಸಿ ಪ್ರಕೃತ ಸಾಲಿನ ಅಧ್ಯಕ್ಷ ಇದಿನಬ್ಬ ಅಡ್ಕ ದನ್ಯವಾದದೊಂದಿಗೆ ಸಭೆಯನ್ನು ಕೊನೆಗೊಳಿಸಲಾಯಿತು.