Site icon Suddi Belthangady

ಬೆಳಾಲು: ಗೌಡರಯಾನೆ ಒಕ್ಕಲಿಗರ ಸಂಘದ ವಾರ್ಷಿಕೋತ್ಸವ – ಸಾಧಕರಿಗೆ ಸನ್ಮಾನ

ಬೆಳಾಲು: ಗೌಡರಯಾನೆ ಒಕ್ಕಲಿಗರ ಸೇವಾ ಸಂಘ, ಯುವ ವೇದಿಕೆ ಮತ್ತು ಮಹಿಳಾ ವೇದಿಕೆಯ ವತಿಯಿಂದ ಡಿ. 8 ರಂದು ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ವಾರ್ಷಿಕೋತ್ಸವ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ತಾಲೂಕು ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ ನೆರವೇರಿಸಿ ಮಾತನಾಡುತ್ತಾ ಯುವಕ ಯುವತಿಯರಿಗೆ ಸಂಘಟನೆ ಕಟ್ಟುವ ಜಾಗೃತಿಯನ್ನು ಮೂಡಿಸಿದರು. ಎಷ್ಟೇ ಕೆಲಸಗಳ ಒತ್ತಡವಿದ್ದರೂ ಕೂಡ ಇಂತಹ ಸಜಾತಿ ಬಾಂಧವರ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎನ್ನುವ ಸಂದೇಶವನ್ನು ನೀಡಿದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲ ಪೂವಪ್ಪ ಕಣಿಯೂರು ಮಾತನಾಡುತ್ತಾ ಗ್ರಾಮದಲ್ಲಿ ಯುವಕ ಯುವತಿಯರು ಇಂತಹ ಸಂಘಟನೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಹಿರಿಯರು ಹಾಕಿದ ಚೌಕಟ್ಟನ್ನು ಮೀರದೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎನ್ನುವ ಸಂದೇಶವನ್ನು ನೀಡಿದರು. ಇನ್ನೋರ್ವ ಮುಖ್ಯ ಅತಿಥಿಗಳಾದ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಗೌರವಾಧ್ಯಕ್ಷ ಹೆಚ್. ಪದ್ಮಗೌಡ ಮಾತನಾಡುತ್ತಾ ವಾಣಿ ವಿದ್ಯಾ ಸಂಸ್ಥೆಯಲ್ಲಿ ನಮ್ಮ ಸಜಾತಿ ಬಾಂಧವರಿಗೆ ಸಿಗುವ ಸೌಲಭ್ಯಗಳು, ವಾಣಿ ಕೋ ಆಪರೇಟಿವ್ ಸಂಘದಲ್ಲಿ ಸಿಗುವ ಸೌಲಭ್ಯ, ಪ್ರಸ್ತುತ ಕಟ್ಟುತ್ತಿರುವ ಹಾಲ್ ಬಗ್ಗೆ ಮಾಹಿತಿಯನ್ನು ನೀಡಿದರು.

ಈ ಸಭಾ ವೇದಿಕೆಯ ಅಧ್ಯಕ್ಷ ಸ್ಥಾನವನ್ನು ಗ್ರಾಮ ಸಮಿತಿ ಅಧ್ಯಕ್ಷ ವಿಜಯ ಗೌಡ ಸೌತೆಗದ್ದೆ ವಹಿಸಿ ಮಾತನಾಡುತ್ತಾ ಗ್ರಾಮ ಸಮಿತಿಯಿಂದ ತಾಲೂಕು ಕಟ್ಟಡದ ನಿರ್ಮಾಣಕ್ಕೆ ರೂ. 50,000 ದೇಣಿಗೆ ನೀಡುವುದೆಂದು ವಾಗ್ದಾನ ನೀಡಿದರು. ವೇದಿಕೆಯಲ್ಲಿ ಬೆಳಾಲು ಗ್ರಾಮದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಉಷಾ ದೇವಿ ಕಿನ್ಯಾಜೆ, ಗ್ರಾಮ ಸಮಿತಿಯ ಗೌರವ ಅಧ್ಯಕ್ಷ ಸುರೇಂದ್ರ ಗೌಡ ಸುರುಳಿ, ಯುವ ವೇದಿಕೆಯ ಅಧ್ಯಕ್ಷ ಉಮೇಶ್ ಗೌಡ ಮಂಜೊತ್ತು, ಮಹಿಳಾ ವೇದಿಕೆಯ ಅಧ್ಯಕ್ಷೆ ಕನ್ನಿಕಾ ಪದ್ಮಗೌಡ, ತಾಲೂಕು ಮಹಿಳಾ ವೇದಿಕೆಯ ಕಾರ್ಯದರ್ಶಿ ಲೀಲಾ ವೀರಣ್ಣ ಗೌಡ, ಹಾಗೂ ಊರಿನ ಗೌಡರುಗಳು ಮತ್ತು ಒತ್ತು ಗೌಡರುಗಳು ಉಪಸ್ಥಿತರಿದ್ದರು.

ಯಕ್ಷಗಾನದಲ್ಲಿ ಜಿಲ್ಲಾರಾಜ್ಯೋತ್ಸವ ಪ್ರಶಸ್ತಿ ಪಡೆದ ಲಕ್ಷ್ಮಣ ಗೌಡ ಪುಳಿತಡಿ, ನಿವೃತ್ತ ಪಂಚಾಯತ್ ನೌಕರ ಮಂಜುನಾಥ ಗೌಡ, ಲೀಲಾ ವೀರಣ್ಣ ಗೌಡ ಬೆಳಾಲು ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಕೊಲ್ಪಾಡಿ, ಸುಶೀಲ ನಿವೃತ್ತ ಅಂಗನವಾಡಿ ಸಹಾಯಕಿ ಕೊಲ್ಪಾಡಿ, ಶೀಲಾ ಬಿ. ಎಸ್. ಭಂಡಾರಿ ಮಜಲು ಬಿಸಿಯೂಟ ಸಹಾಯಕಿ ಪಿರಿಯಡ್ಕ ಶಾಲೆ, ಶಾರದ ಬೊಮ್ಮಣ್ಣ ಗೌಡ ಆದರ್ಶ ನಗರ ಬೆಳಾಲು, ಬಿಸಿಯೂಟ ಸಹಾಯಕಿ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆ ಬೆಳಾಲು ಇವರನ್ನು ಸನ್ಮಾನಿಸಲಾಯಿತು.

ವಾರ್ಷಿಕ ವರದಿಯನ್ನು ಯುವ ವೇದಿಕೆ ಕಾರ್ಯದರ್ಶಿ ಸಂಜೀವ ಗೌಡ ಕಾಡಂಡ ವಾಚಿಸಿದರು. 10 ನೇ ತರಗತಿಯಲ್ಲಿ ಮತ್ತು ಪಿ.ಯು.ಸಿಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಜಿಲ್ಲಾ ರಾಜ್ಯ ಮಟ್ಟದಲ್ಲಿ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪಟ್ಟಿಯನ್ನು ಕರಿಯಣ್ಣ ಗೌಡ ಬೇರಿಕೆ ವಾಚಿಸಿದರು. ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವವನ್ನು ನೀಡಿದವರ ಪಟ್ಟಿಯನ್ನು ಶೇಖರ್ ಗೌಡ ಕೊಳ್ಳಿಮಾರು ವಾಚಿಸಿದರು. ಕ್ರೀಡಾಕೂಟದಲ್ಲಿನ ವಿಜೇತರ ಪಟ್ಟಿಯನ್ನು ಮಾಧವ ಗೌಡ ಓಣಾಜೆ ಹಾಗೂ ನಿಶಾ ಯಶವಂತ ಬನಂದೂರು ವಾಚಿಸಿದರು.

ಈ ಸಮಾರಂಭದಲ್ಲಿ ಅಂಗನವಾಡಿ 4 ನೇ ತರಗತಿವರೆಗಿನ ಪುಟಾಣಿಗಳಿಗೆ ಪರಿಚಯ ಕಾರ್ಯಕ್ರಮವನ್ನು ಮಾಡಿ ಬಹುಮಾನ ನೀಡಿ ಗೌರವಿಸಲಾಯಿತು. ಲೀಲ ವೀರಣ್ಣಗೌಡ ಬೆಳಾಲು ಹಾಗೂ ಶೀಲಾವತಿ ಪುಚ್ಚೆ ಹಿತ್ತಿಲು ನಿರ್ವಹಿಸಿದರು. ಮಧ್ಯಾಹ್ನದ ನಂತರ ಊರಿನ ಸುಜಾತಿ ಬಾಂಧವರಿಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಇದರ ನಿರೂಪಣೆಯನ್ನು ಜಯಶ್ರೀ ಕಾಡಂಡ, ಲೋಕಮ್ಮ ಬೈತ್ಯಾರಡ್ಡ ನಿರ್ವಹಿಸಿದರು.

ಈ ಸಮಾರಂಭಕ್ಕೆ ಉಜಿರೆ ಗ್ರಾಮ ಸಮಿತಿಯ ಗೌರವ ಅಧ್ಯಕ್ಷರು ಪ್ರಕಾಶ ಪ್ರಮೇಯ, ಅಧ್ಯಕ್ಷರು ಧರ್ಮಪ್ಪ ಧರಣಿ ಕಾರ್ಯದರ್ಶಿ ಶೇಖರ ಗೌಡ ಹಾಗೂ ಕೊಯ್ಯುರು ಗ್ರಾಮ ಸಮಿತಿಯ ಅಧ್ಯಕ್ಷ ವಿಜಯ ಗೌಡ ಆಗಮಿಸಿದ್ದರು.

ಈ ಸಮಾರಂಭಕ್ಕೆ ಊರಿನ ಗಣ್ಯರುಗಳಾದ ಕಿನ್ನಿಗೌಡ ಗಣಪನಗೊತ್ತು, ಜಯಾನಂದ ಗೌಡ ವಿನಂದೇಳು, ಶ್ರೀನಿವಾಸ ಗೌಡ ಶ್ರೀ ಸೌಧ ಬೆಳಾಲು, ವಿದ್ಯಾ ಶ್ರೀನಿವಾಸಗೌಡ ಬೆಳಾಲು, ಕುಂಬ ಗೌಡ ಮಾಯ, ಪೆರಣಗೌಡ ಪರಾರಿಮನೆ, ನೇಮಣ್ಣ ಗೌಡ ಮಾರ್ಪಾಲು, ಶ್ರೀನಿವಾಸಗೌಡ ಗಣಪನಗೊತ್ತು, ಮೋನಪ್ಪ ಗೌಡ ಬೆಳಾಲು, ಕೇಶವ ಗೌಡ ಬೆಳಾಲು, ಪುಷ್ಪರಾಜ ಗೌಡ ಬೆಳಾಲು, ಪ್ರೇಮ ಪೊಯ್ಯದಡ್ಡ, ಮಾಧವಿ ಮೈರಾಜೆ, ಜಯಶ್ರೀ ಆದರ್ಶ ನಗರ, ಲಲಿತ ಬೆಳಾಲು ಮೊದಲಾದವರು ಭಾಗವಹಿಸಿದ್ದರು.

ಕನ್ನಿಕಾ ಪದ್ಮಗೌಡ, ಲತಾ ಕೇಶವ ಗೌಡ, ಲೀಲಾ ವೀರಣ್ಣ ಗೌಡ ಪ್ರಾರ್ಥಿಸಿದರು. ಪ್ರಾಸ್ತಾವನೆಯೊಂದಿಗೆ ಧರ್ಮೇಂದ್ರ ಗೌಡ ಪುಚ್ಚೆತ್ತಿಲು ಸ್ವಾಗತಿಸಿದರು. ಗ್ರಾಮ ಸಮಿತಿಯ ಕಾರ್ಯದರ್ಶಿ ಉಮೇಶ್ ಗೌಡ ಮಂಜೊತ್ತು ವಂದಿಸಿದರು. ಕಾರ್ಯಕ್ರಮದ ಸಂಯೋಜನೆಯನ್ನು ಮಹೇಶ್ ಗೌಡ ಪುಳಿತಡಿ ಗೌರವಾಧ್ಯಕ್ಷ ಯುವ ವೇದಿಕೆ, ಕಾರ್ಯಕ್ರಮದ ನಿರೂಪಣೆಯನ್ನು ಬೆಳಿಯಪ್ಪ ಗೌಡ ಕೆರೆಕೋಡಿ ನಿರ್ವಹಿಸಿದರು.

Exit mobile version