Site icon Suddi Belthangady

ಮುಂಡಾಜೆ: ಕಾನೂನು ಅರಿವು ಕಾರ್ಯಕ್ರಮ

ಮುಂಡಾಜೆ: ಪದವಿ ಪೂರ್ವ ಕಾಲೇಜು ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪುತ್ತೂರು ಇದರ ಸಹಯೋಗದೊಂದಿಗೆ ಪದವಿ ಪೂರ್ವ ಕಾಲೇಜಿನಲ್ಲಿ “ಕಾನೂನು ಅರಿವು ಮಾಹಿತಿ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೆಳ್ತಂಗಡಿಯ ವಕೀಲರಾದ ಪ್ರತಿಕ್ಷಾ ವಿದ್ಯಾರ್ಥಿಗಳಿಗೆ, ವಾಹನ ಕಾಯ್ದೆಯ ಬಗ್ಗೆ ವಿವರಿಸಿ, ಸಂಚಾರ ನಿಯಮಗಳ ಬಗ್ಗೆ, ವಾಹನ ನೋಂದಣಿ ಬಗ್ಗೆ, ಪರವಾನಿಗೆಯ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿದರು.

ವಿವೇಕಾನಂದ ಕಾನೂನು ಕಾಲೇಜಿನ ಕಾನೂನು ವಿದ್ಯಾರ್ಥಿ ಶ್ರೇಯಸ್, ಸೈಬರ್ ಕ್ರೈಂ ಮತ್ತು ಪೋಕ್ಸೋ ಕಾಯ್ದೆಯ ಬಗ್ಗೆ ಮಾತನಾಡಿದರು. ಹಾಗೂ ವಿವೇಕಾನಂದ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಆಶಿತಾ ಕೆ, ಕಾನೂನು ಶಿಕ್ಷಣದ ಮಹತ್ವವನ್ನು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲೆ ಜಾಲಿ ಓ. ಎ ಅಧ್ಯಕ್ಷತೆ ವಹಿಸಿದ್ದರು.

ಕಾಲೇಜಿನ ಕಾನೂನು ಸಾಕ್ಷರತಾ ಕ್ಲಬ್, ಗ್ರಾಮ ವಿಕಾಸ ಸಮಿತಿ, ಮಹಿಳಾ ಕೋಶ, ಎನ್. ಎಸ್. ಎಸ್ ಘಟಕ ಸಹಭಾಗಿತ್ವ ವಹಿಸಿದ್ದವು. ಎನ್. ಎಸ್. ಎಸ್ ಕಾರ್ಯಕ್ರಮಾಧಿಕಾರಿ ನಮಿತಾ ಕೆ. ಆರ್ ಸ್ವಾಗತಿಸಿದರು. ವಿದ್ಯಾರ್ಥಿ ಲತೇಶ್ ಕಾರ್ಯಕ್ರಮವನ್ನು ನಿರೂಪಿಸಿ, ಕುಮಾರಿ ಛಾಯ ಧನ್ಯವಾದಗೈದರು.

Exit mobile version