Site icon Suddi Belthangady

ಪಿಲ್ಯ: ಗುಡ್ ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

ಪಿಲ್ಯ: ಡಿ. 04 ರಂದು ಗುಡ್ ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟವನ್ನು ನಡೆಸಲಾಯಿತು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶಾಜಿ ಕೆ. ಕುರಿಯನ್ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ” ಸೋಲಿನಿಂದ ಯಾರೂ ಕಂಗೆಡಬೇಕಿಲ್ಲ. ಯಾಕೆಂದರೆ ಸೋಲು ಗೆಲುವಿಗಿಂತಲೂ ಹೆಚ್ಚು ಪಾಠ ಕಲಿಸುತ್ತದೆ, ಅನುಭವ ಹೆಚ್ಚಿಸುತ್ತದೆ ” ಸೋಲು ಗೆಲುವಿನ ಬಗ್ಗೆ ಯೋಚಿಸದೆ ಆಟವಾಡಿ ಎಂದರು.

ಶಾಲಾ ಸಂಚಾಲಕ ನಸೀರ್ ಅಹಮದ್ ಖಾನ್ ಕ್ರೀಡಾ ಕೂಟದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಕ್ಕಳಿಗೆ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯ ಪ್ರಭಾಕರ ಶೆಟ್ಟಿ ” ಕ್ರೀಡೆ ನಮ್ಮ ಜೀವನಕ್ಕೆ ಅವಶ್ಯಕ. ಇದು ಉತ್ತಮ ವ್ಯಾಯಾಮವನ್ನು ನೀಡುತ್ತದೆ “ಎಂದರು.

ಕ್ರೀಡೆಯಲ್ಲಿ ಸಾಧನೆ ಮಾಡಿದ ಶಾಲೆಯ ವಿದ್ಯಾರ್ಥಿಗಳಾದ ಶೆರ್ವಿನ್, ಫವಾಝ್, ಬಿಬಿನಾಝ್, ಸಲ್ವಾ ಕ್ರೀಡಾ ಜ್ಯೋತಿ ಬೆಳಗಿಸಿದರು. 100, 200 ಮೀಟರ್ ಓಟ, ಡಿಸ್ಕಸ್ ಥ್ರೋ, ಎತ್ತರ ಜಿಗಿತ, ಉದ್ದ ಜಿಗಿತ, ಹಗ್ಗಜಗ್ಗಾಟ, ತ್ರೋಬಾಲ್ ಸ್ಪರ್ಧೆಗಳು ನಡೆದವು. ವಿಜೇತರನ್ನು ಪದಕ ಹಾಗೂ ಪ್ರಶಸ್ತಿ ಪತ್ರದೊಂದಿಗೆ ಸನ್ಮಾನಿಸಲಾಯಿತು.
ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ವೀರೇಂದ್ರ ಜೈನ್ ಹಾಗೂ ಹರಿಣಾಕ್ಷಿ ,ಶಿಕ್ಷಕ ರಕ್ಷಕ ಸಂಘದ ಸದಸ್ಯ ಧನಕೀರ್ತಿ ಜೈನ್, ಆಮಂತ್ರಣ ದ ಶ್ರೀ ವಿಜಯೇಂದ್ರ ಜೈನ್, ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಶಿಕ್ಷಕಿ ಪ್ರಣೀತಾ ಸ್ವಾಗತಿಸಿದರು. ಶಾಲೆಯ ದೈಹಿಕ ಶಿಕ್ಷಕ ಶ್ರೀ ಅಶೋಕ್ ಕ್ರೀಡಾ ಕೂಟ ಸಂಯೋಜಿಸಿದರು. ಅಶ್ಮಿತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Exit mobile version