Site icon Suddi Belthangady

ಅದಿತಿ ಮುಗಿರೋಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ

ಬೆಳ್ತಂಗಡಿ: ಪದ್ಮುಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಅದಿತಿ ಮುಗಿರೋಡಿ ಒಂದು ನಿಮಿಷದಲ್ಲಿ ಮೊಣಕೈಯಿಂದ ಮೊಣಕೈಗೆ ಗರಿಷ್ಠ ಸಂಖ್ಯೆಯ ಪುಶ್ ಅಪ್‌ ನಲ್ಲಿ 138ಕ್ರಂಚಸ್ ಮಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ಬರೆದಿದ್ದಾರೆ.

ಇವರನ್ನು ಆವಿಷ್ಕಾರ ಯೋಗ ಮಂಗಳೂರು ಮತ್ತು ಸಹ ಸಂಘಟಕರ ನೇತೃತ್ವದಲ್ಲಿ ಪದ್ಮಂಜ ರೈತ ಸಭಾಭವನದಲ್ಲಿ ನಡೆದ 12 ಗಂಟೆಗಳ ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.

ಇವರು ಆವಿಸ್ಕಾರ ಯೋಗ ಮಂಗಳೂರು ಇದರ ಯೋಗ ಗುರುಗಳಾದ ಕುಶಾಲಪ್ಪಗೌಡ ನೆಕ್ಕರಾಜೆ ಅವರ ಶಿಷ್ಯ. ಇವರು ಕರ್ನಾಟಕ ರಾಜ್ಯ ಡಾಕ್ಟರ್ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು ಇವರು ನಡೆಸಿದ ಭರತನಾಟ್ಯ ಜೂನಿಯರ್ ವಿಭಾಗದ ಪರೀಕ್ಷೆಯನ್ನು ಈಗಾಗಲೇ ಮುಗಿಸಿದ್ದು, ಈಕೆ ಶ್ರೀ ಶಾರದಾ ಕಲಾ ಕೇಂದ್ರ ಟ್ರಸ್ಟ್ ರಿಜಿಸ್ಟರ್ಡ್ ಪುತ್ತೂರು ಇದರ ನಿರ್ದೇಶಕರಾದ ವಿದ್ವಾನ್ ಸುದರ್ಶನ್. ಎಂ.ಎಲ್. ಭಟ್ ಇವರ ಶಿಷ್ಯೆ. ವಿದುಷಿ ಡಿಂಪಲ್ ಶಿವರಾಜ್ ಇವರಲ್ಲಿ ಏಳು ವರ್ಷಗಳಿಂದ ಶ್ರೀ ಶಾರದಾ ಕಲಾ ಶಾಖೆ ಪದ್ಮಂಜ ಇಲ್ಲಿ ಭರತನಾಟ್ಯವನ್ನು ಕಲಿಯುತ್ತಿದ್ದಾರೆ.

ಮಂಜುಳಾ ಮತ್ತು ಪುರುಷೋತ್ತಮ ಗೌಡ ಮುಗೆರೋಡಿ ಇವರ ಪುತ್ರಿ.

Exit mobile version