ಬಂಗಾಡಿ: ಸಹಕಾರಿ ವ್ಯವಸಾಯಿಕ ಸಂಘ(ನಿ) ಇದರ ಚುನಾವಣೆಯಲ್ಲಿ ಮತ್ತೆ ಸಹಕಾರ ಭಾರತೀಯ ಮಡಿಲಿಗೆ ಅದೃಷ್ಟ ಒಳಿದು ಬಂದಿದೆ. ಸಾಲಗಾರರ ಸಾಮಾನ್ಯ ಕ್ಷೇತ್ರದಲ್ಲಿ ಆನಂದ ಗೌಡ, ವಸಂತಗೌಡ, ಹರೀಶ್ ಸಾಲಿಯಾನ್, ವಿನಯಚಂದ್ರ, ಹರೀಶ್ ಪೂಜಾರಿ, ಪ್ರಮೋದ್ ಕುಲಾಲ್ ಕಣದಲ್ಲಿ ಸ್ಪರ್ಧಿಸಿ ವಿಜಯ ಶಾಲಿಗಳಾಗಿದ್ದಾರೆ.
ಸಾಲಗಾರ ಹಿಂದುಳಿದ ವರ್ಗ ‘ಎ’ ಕ್ಷೇತ್ರ ದಿಂದ ರಮೇಶ್ ಕೆಂಗಾಜೆ, ಸಾಲಗಾರ ಹಿಂದುಳಿದ ವರ್ಗ ‘ಬಿ’ ಕ್ಷೇತ್ರ ದಿಂದ ಶೀನಪ್ಪ ಗೌಡ, ಸಾಲಗಾರ ಮಹಿಳಾ ಕ್ಷೇತ್ರದಿಂದ ಪುಷ್ಪಲತಾ.ಕೆ, ವೇದಾವತಿ, ಸಾಲಗಾರ ಪ.ಜಾತಿ ಕ್ಷೇತ್ರದಿಂದ ರಘುನಾಥ, ಸಾಲಗಾರ ಪ.ಪಂಗಡ ಕ್ಷೇತ್ರದಿಂದ ಸತೀಶ್ ನಾಯ್ಕ್ ಬಹುಮತಗಳಿಂದ ಗೆದ್ದು ಮತ್ತೆ ಸಹಕಾರ ಭಾರತೀಯ ಮಡಿಲಿಗೆ ಗೆಲುವಿನ ನಗೆ ಬೀರಿದ್ದಾರೆ.