ಉಜಿರೆ: ಡಿ. 4 ರಂದು ವಿಶ್ವ ಏಡ್ಸ್ ದಿನ ಅಂಗವಾಗಿ ಎಸ್. ಡಿ. ಎಂ ಮಹಿಳಾ ಐ. ಟಿ. ಐ ಯಲ್ಲಿ ಡಿ. 3 ರಂದು ಏಡ್ಸ್ ಜಾಗೃತಿ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿ ಉಜಿರೆಯ ಎಸ್. ಡಿ. ಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಉಪಪ್ರಾಂಶುಪಾಲ ಸುಜಾತ ಏಡ್ಸ್ ಹರಡುವ ವಿಧಾನ, ತಡೆಗಟ್ಟುವಿಕೆ, ರಕ್ತದಾನ ಮಾಡುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಇತ್ಯಾದಿ ವಿಚಾರ ಕುರಿತು ಮಾತನಾಡಿದರು. ಸರ್ಕಾರಗಳು ಕಳೆದ 20 ವರ್ಷಗಳಿಂದ ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವ ಪರಿಣಾಮ ಏಡ್ಸ್ ರೋಗಿಗಳ ಸಂಖ್ಯೆ ವರ್ಷದಿಂದ ವರ್ಷ ಕಡಿಮೆಯಾಗುತ್ತಾ ಬಂದಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ದಿವ್ಯಾ ಉಪಸ್ಥಿತರಿದ್ದರು. ಕಿರಿಯ ತರಬೇತಿ ಅಧಿಕಾರಿ ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು.