Site icon Suddi Belthangady

ಪುದುವೆಟ್ಟು: ಬಾಯಿತ್ಯಾರು ವೆಲ್ಡಿಂಗ್ & ಹಾರ್ಡ್ ವೇರ್ ಮಳಿಗೆ ಲೋಕಾರ್ಪಣೆ – ಗೆಳತಿಯರಿಂದ ಉದ್ಘಾಟನೆ

ಪುದುವೆಟ್ಟು: ವೆಲಂಕಣಿ ಸಿಮೆಂಟ್ & ವೆಲ್ಡಿಂಗ್ ವರ್ಕ್ಸ್ ಸಂಸ್ಥೆಯ ಮಾಲಕ ಶಿಬು ಆಗಸ್ಟಿನ್ ನೂತನವಾಗಿ ಪುದುವೆಟ್ಟಿನ ಬಾಯಿತ್ಯಾರಿನಲ್ಲಿ ಆರಂಭಿಸುತ್ತಿರುವ ಬಾಯಿತ್ಯಾರು ವೆಲ್ಡಿಂಗ್ & ಹಾರ್ಡ್ ವೇರ್ ಸಂಸ್ಥೆಯನ್ನು ಡಿ. 7 ರಂದು ದಿವ್ಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಇಬ್ಬರು ಗೆಳತಿಯರು ಉದ್ಘಾಟನೆ ನೆರವೇರಿಸಿದರು.

ಕಳೆoಜ ಸೆಂಟ್ ಸೆಬಾಸ್ಟಿನ್ ಚರ್ಚ್ ನ ವಂದನೀಯ ಫಾದರ್ ಜೋಸೆಫ್ ಆಶೀರ್ವಾದ ನೀಡಿದರು. ಮುಖ್ಯ ಅತಿಥಿಗಳಾಗಿ ಪುದುವೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪೂರ್ಣಕ್ಷ, ಬೆಳ್ತಂಗಡಿ ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ಬೊಮ್ಮಣ್ಣ ಗೌಡ, ಎಸ್. ಡಿ. ಎಂ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಎಂ. ಜನಾರ್ಧನ್, ಪುದುವೆಟ್ಟು ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಯಶವಂತ್ ಗೌಡ ಉಪಸ್ಥಿತರಿದ್ದು ಶುಭಕೋರಿದರು.

ಸಂಸ್ಥೆಯಲ್ಲಿ ಹಾರ್ಡ್ ವೇರ್ ವಸ್ತುಗಳು, ಪೈಪ್ ಫಿಟ್ಟಿಂಗ್ಸ್, ಜಿ. ಐ ಸ್ಕ್ವೇರ್ ಪೈಪ್, ಜಿ. ಐ ರೌಂಡ್ ಪೈಪ್, ಪಿ.ವಿ.ಸಿ ಪೈಪ್, ಶಟ್ಟರ್, ರೂಫಿಂಗ್, ಗೇಟ್ ಗ್ರಿಲ್ ಮತ್ತು ಎಲ್ಲಾ ರೀತಿಯ ವೆಲ್ಡಿಂಗ್ ಕೆಲಸಗಳು, ಸಿಮೆಂಟ್ ಬ್ಲಾಕ್ಸ್, ಲಿಂಟೆಲ್, ಸಿಮೆಂಟ್ ಶೀಟ್ ಲಭ್ಯವಿದ್ದು ಎಲ್ಲಾ ಕೆಲಸವನ್ನು ಮತ್ತು ವಸ್ತುಗಳನ್ನು ಮಿತ ದರದಲ್ಲಿ ಮಾಡಿ ಕೊಡಲಾಗುವುದು ಎಂದು ಸಂಸ್ಥೆಯ ಮಾಲಕ ಶಿಬು ಆಗಸ್ಟಿನ್ ತಿಳಿಸಿದರು.

Exit mobile version