Site icon Suddi Belthangady

ಗುರುವಾಯನಕೆರೆ: ವಿಜಯ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯಲ್ಲಿ ಅಭಿನಂದನಾ ಕಾರ್ಯಕ್ರಮ- ಗ್ರಾಹಕರ ಸಮಾಲೋಚನಾ ಸಭೆ

ಗುರುವಾಯನಕೆರೆ: ವಿಜಯ ಕ್ರೇಡಿಟ್ ಕೋ ಆಪರೇಟಿವ್ ಸೊಸೈಟಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹ 2024ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಪತ್ತಿನ ಸಹಕಾರಿ ಸಂಘ ಪ್ರಶಸ್ತಿ ಪಡೆದ ಪ್ರಯುಕ್ತ
ಅಭಿನಂದನಾ ಕಾರ್ಯಕ್ರಮ ಹಾಗೂ ಗ್ರಾಹಕರ ಸಮಾಲೋಚನಾ ಸಭೆ ಡಿ. 4 ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಪುತ್ತೂರು ಆದರ್ಶ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸವಣೂರು ಸೀತಾರಾಮ ರೈ ವಹಿಸಿದ್ದರು. ಸೊಸೈಟಿ ಅಧ್ಯಕ್ಷ ಎಸ್. ಜಯರಾಮ ಶೆಟ್ಟಿರವರನ್ನು ಸೊಸೈಟಿ ವತಿಯಿಂದ ಹಾಗು ತಾಲೂಕು ಬಂಟರ ವತಿಯಿಂದ ಅಭಿನಂದಿಸಲಾಯಿತು.

ಮುಖ್ಯ ಅತಿಥಿಗಳಾಗಿ ಉದ್ಯಮಿ ಶಶಿಧರ ಬಿ. ಶೆಟ್ಟಿ “ನವಶಕ್ತಿ”, ಉಜಿರೆ ಶ್ರೀ ಧ. ಮ. ಕಾಲೇಜು ಡಾ. ಬಿ. ಎ. ಕುಮಾರ್ ಹೆಗ್ಡೆ, ತಾಲೂಕು ಬಂಟರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಬಿ., ಸೊಸೈಟಿಯ ಉಪಾಧ್ಯಕ್ಷ ಎಂ. ಜಿ. ಶೆಟ್ಟಿ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಸುಜಯ್ ಶೆಟ್ಟಿ, ನಿರ್ದೇಶಕರುಗಳಾದ ಬಿ. ಸೀತಾರಾಮ ಶೆಟ್ಟಿ, ಬಾಲಕೃಷ್ಣ ಪೂಂಜ ಹೆಚ್, ಜಯಂತ ಶೆಟ್ಟಿ, ಪುಷ್ಪರಾಜ್ ಶೆಟ್ಟಿ, ಬಿ. ನಾರಾಯಣ ಶೆಟ್ಟಿ, ಕೃಷ್ಣ ರೈ ಟಿ., ರಘುರಾಮ ಶೆಟ್ಟಿ ಎ., ಕೆ. ಸದಾಶಿವ ಶೆಟ್ಟಿ, ಅಂಬಾ ಬಿ. ಅಳ್ವ, ಪುರಂದರ ಶೆಟ್ಟಿ, ಜಯರಾಮ ಭಂಡಾರಿ ಎಂ., ಮಂಜುನಾಥ ರೈ, ಸಾರಿಕಾ ಶೆಟ್ಟಿ, ಸೊಸೈಟಿಯ ಗ್ರಾಹಕರು, ವಿವಿಧ ಶಾಖಾ ವ್ಯವಸ್ಥಾಪಕರು, ಸಿಬ್ಬಂದಿಗಳು ಹಾಜರಿದ್ದರು. ಈ ಸಂದರ್ಭದಲ್ಲಿ ಕ್ಯಾಲೆಂಡರ್ ನ್ನು ಡಾ. ಕುಮಾರ್ ಹೆಗ್ಡೆ, ಡೈರಿಯನ್ನು ಬಂಟ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ಬಿಡುಗಡೆಗೊಳಿಸಿದರು. ಗ್ರಾಹಕರ ಪರವಾಗಿ ಶೇಷಗಿರಿ ನಾಯಕ್ ಮಡಂತ್ಯಾರ್, ಮೋಹನ್ ಕುಮಾರ್ ಉಜಿರೆ ಅನಿಸಿಕೆ ವ್ಯಕ್ತಪಡಿಸಿದರು.

Exit mobile version