ಮಡಂತ್ಯಾರ್: ಕೊಲ್ಪೆದ ಬೈಲು ಮನೆಯ ಒಲ್ವಿನ್ ವುಡ್ ವರ್ಕ್ಸ್ ಮಾಲಕ ಒಲ್ವಿನ್ ಪುಟರ್ಡೊ (49ವ) ಬಾವಿಗೆ ಬಿದ್ದು ಮೃತ ಪಟ್ಟ ಘಟನೆ ಡಿ. 3 ರಂದು ಬೆಳಿಗ್ಗೆ ನಡೆದಿದೆ. ಮೃತರು ಕೊಲ್ಪೆದ ಬೈಲು ಓಲ್ವಿನ್ ವುಡ್ ವರ್ಕ್ಸ್ ಕೆಲಸವನ್ನು ನಿರ್ವಹಿಸಿಕೊಂಡು ಬರುತಿದ್ದು ಎಲ್ಲರಿಗೂ ಪರಿಚಯಸ್ಥರಾಗಿದ್ದರು. ಇವರು ಪತ್ನಿ ವಿಜಯ ನೋರಾ ಪುಟರ್ಡೊ, ಮಕ್ಕಳಾದ ಹೆರಾಲ್ಡ್ ಪುಟರ್ಡೊ ಮತ್ತು ಎಡಿಯಾಲ್ ಪುಟರ್ಡೊ ರನ್ನು ಅಗಲಿದ್ದಾರೆ.