Site icon Suddi Belthangady

ಬೆಳ್ತಂಗಡಿ: ಸುನ್ನಿ ಮ್ಯಾನೇಜ್’ಮೆಂಟ್ ಅಸೋಸಿಯೇಷನ್ (SMA)ಝೋನಲ್ ವಾರ್ಷಿಕ ಮಹಾಸಭೆ

ಬೆಳ್ತಂಗಡಿ: ವಾರ್ಷಿಕ ಮಹಾಸಭೆಯು ಝೋನ್ ಅಧ್ಯಕ್ಷರಾದ ಯಾಕೂಬ್ ಉಸ್ತಾದ್ ರ ಅಧ್ಯಕ್ಷತೆಯಲ್ಲಿ ಗುರುವಾಯನಕೆರೆ ಮಸೀದಿ ಸಭಾಂಗಣದಲ್ಲಿ ನ. 26 ರಂದು ಮಂಗಳವಾರ ನಡೆಯಿತು. ಸ್ಥಳೀಯ ಖತೀಬ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಬಶೀರ್ ಮದನಿ ಜೋಗಿಬೊಟ್ಟು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವರದಿ ವಾಚಿಸಿ ಲೆಕ್ಕ ಪತ್ರ ಮಂಡಿಸಿದರು. ಸಭೆಯು ಸರ್ವಾನುಮತದಿಂದ ಅಂಗೀಕರಿಸಿತು.

ವೀಕ್ಷಕರಾಗಿ ಆಗಮಿಸಿದ ಯೂಸುಫ್ ಸಾಜ ಹಾಗೂ ಹಮೀದ್ ಹಾಜಿ ಕೊಡುಂಗೈರವರ ನೇತೃತ್ವದಲ್ಲಿ ಹಳೆಯ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿಯನ್ನು ರಚಿಸಿದರು. ಅಧ್ಯಕ್ಷರಾಗಿ ಉಮರ್ ಮಟನ್ ಗುರುವಾಯನಕೆರೆ, ಪ್ರಧಾನ ಕಾರ್ಯದರ್ಶಿ ಖಲಂದರ್ ಶಾಫಿ ಮದನಿ ಮಾಲಾಡಿಪಲ್ಕೆ, ಕೋಶಾಧಿಕಾರಿ ಅಬ್ದುಲ್ ಖಾದರ್ ಉಳ್ತೂರು ಹಾಗೂ ಉಪಾಧ್ಯಕ್ಷರುಗಳಾಗಿ ಎಚ್. ಎಮ್. ಹಸನಬ್ಬ ಮದ್ದಡ್ಕ, ಕೆ. ವೈ ಇಸ್ಮಾಯಿಲ್ ವೇಣೂರು, ಕಾರ್ಯದರ್ಶಿಗಳಾಗಿ ಮುಶ್ಕಾಕ್ ಮಡಂತ್ಯಾರು, ಜೌಹರ್ ಅಹ್ಸನಿ ವೇಣೂರು, ಮುಹಮ್ಮದ್ ಗೋವಿಂದೂರುರವರನ್ನು ಆಯ್ಕೆ ಮಾಡಲಾಯಿತು. ನೂತನ ಕಾರ್ಯದರ್ಶಿ ವಂಧಿಸಿ ಮೂರು ಸ್ವಲಾತ್ ನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

Exit mobile version