Site icon Suddi Belthangady

ಅಳದಂಗಡಿ: ಸರಕಾರಿ ಪದವಿ ಪೂರ್ವ ಕಾಲೇಜ್ ನಲ್ಲಿ ಕಂಪ್ಯೂಟರ್ ಸ್ಮಾರ್ಟ್ ತರಗತಿಯ ಉದ್ಘಾಟನೆ

ಅಳದಂಗಡಿ: ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿಗಳಿಗೆ ಒದಗಿಸಿದ ಕಂಪ್ಯೂಟರ್ ಸ್ಮಾರ್ಟ್ ತರಗತಿ ವ್ಯವಸ್ಥೆಯ ಉದ್ಘಾಟನೆ ನ. 23 ರಂದು ನಡೆಯಿತು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜ್ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ವಹಿಸಿ, ಗುಣಮಟ್ಟದ ಶಿಕ್ಷಣ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ದೊರಕಿಸುವಲ್ಲಿ ಲಯನ್ಸ್ ಕ್ಲಬ್ ಬೆಳ್ತಂಗಡಿಯ ಸಹಕಾರ ಅತ್ಯಂತ ಗಮನಾರ್ಹವಾದುದು ಎಂದರು.

ಸಮಾರಂಭದ ಉದ್ಘಾಟನೆಯನ್ನು ಪ್ರೊಜೆಕ್ಟರ್ ಸ್ಲೈಡ್ ಮೂಲಕ ನೆರವೇರಿಸಿದ ದಕ್ಷಿಣ ಕನ್ನಡ ಜಿಲ್ಲಾ ಗವರ್ನರ್ ಲಯನ್ ಬಿ. ಎಂ. ಭಾರತಿ(PMJF), ವಿದ್ಯಾರ್ಥಿಗಳು ಕಂಪ್ಯೂಟರ್ ತರಗತಿಯ ಸಂಪೂರ್ಣ ಪ್ರಯೋಜನವನ್ನು ಪಡೆದು ಸ್ಪರ್ಧಾತ್ಮಕವಾಗಿ ಬೆಳೆಯಬೇಕು. ತಾವು ಕೂಡ ತಾಂತ್ರಿಕ ಕೌಶಲ್ಯಗಳಿಂದ ಇತರರಿಗೆ ಸರಿಸಾಟಿಯಾಗಿ ತಂತ್ರಜ್ಞಾನದಲ್ಲಿ ಸ್ಪರ್ಧೆ ನೀಡಬೇಕು ಎಂದರು. ಕೊಡುಗೆ ನೀಡಿದ ಲಯನ್ಸ್ ಕ್ಲಬ್ ನ ಅಧ್ಯಕ್ಷರು ಮತ್ತು ಸದಸ್ಯರ ಕಾರ್ಯವನ್ನು ಶ್ಲಾಘಿಸಿದರು.

ಸಮಾರಂಭದಲ್ಲಿ ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಲಯನ್ ಗೀತಾ ಎಸ್. ರಾವ್, ಚೀಫ್ ರೀಜನಲ್ ಅಧ್ಯಕ್ಷ ಲಯನ್ ವೆಂಕಟೇಶ್ ಹೆಬ್ಬಾರ್, ವಿಭಾಗೀಯ ಅಧ್ಯಕ್ಷ ಲಯನ್ ಉಮೇಶ್ ಶೆಟ್ಟಿ, ಲಯನ್ಸ್ ಕ್ಲಬ್ ಬೆಳ್ತಂಗಡಿ ಅಧ್ಯಕ್ಷ ಲಯನ್ ದೇವದಾಸ್, ಕಾರ್ಯದರ್ಶಿ ಲಯನ್ ಕಿರಣ್ ಶೆಟ್ಟಿ, ಪೂರ್ವ ಅಧ್ಯಕ್ಷ ಲಯನ್ ರಾಘವೇಂದ್ರ ಶೆಟ್ಟಿ ಬಳಂಜ, ಪೂರ್ವ ವಲಯ ಅಧ್ಯಕ್ಷ ಲಯನ್ ಪ್ರತೀಕ್ಷ ಹೆಬ್ಬಾರ್ ಹಾಗೂ ಸಂಸ್ಥೆಯ ಪ್ರಾಂಶುಪಾಲ ಸನ್ನಿ ಕೆ. ಎಂ ಉಪಸ್ಥಿತರಿದ್ದರು. ಆಗಮಿಸಿದ ಎಲ್ಲಾ ಅತಿಥಿ ಗಣ್ಯರನ್ನು ಪ್ರಾಂಶುಪಾಲರು ಸ್ವಾಗತಿಸಿ, ಜೀವಶಾಸ್ತ್ರ ಉಪನ್ಯಾಸಕ ಪ್ರಶಾಂತ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

Exit mobile version