Site icon Suddi Belthangady

ಬೆಳಾಲು ನೇತ್ರಾವತಿ ನದಿಯಲ್ಲಿ ಮುಳುಗಿದ ಆರ್ ಎಸ್ ಎಸ್ ಮುಖಂಡನ ಮೃತದೇಹ ಪತ್ತೆ – ಸಾರ್ವಜನಿಕರ ದರ್ಶನಕ್ಕೆ ಬೆಳಾಲಿನಲ್ಲಿ ವ್ಯವಸ್ಥೆ

ಬೆಳ್ತಂಗಡಿ: ಡಿ.2: ಬೆಳಾಲು ಗ್ರಾಮದ ಕೂಡಿಗೆ ಎಂಬಲ್ಲಿ ನೇತ್ರಾವತಿ ನದಿಗೆ ಇಳಿದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಸೋಮವಾರ ಸಂಜೆ ನಡೆದಿತ್ತು.

ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ನಿವಾಸಿ ಪ್ರಸಾದ್ (38) ಎಂಬವರು ಯಾವುದೋ ಕಾರಣಕ್ಕೆ ನದಿಗೆ ಇಳಿದಿದ್ದು ಬಳಿಕ ಮುಳುಗಿ ನಾಪತ್ತೆಯಾಗಿದ್ದರು.

ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರು ಭೇಟಿ ನೀಡಿದ್ದು, 2 ಗಂಟೆಗಳ ಕಾಲ ನೀರಿನಲ್ಲಿ ಹುಡುಕಾಟ ನಡೆಸಿದ ನಂತರ ಮೃತ ದೇಹ ಪತ್ತೆಯಾಗಿದೆ.

ಪ್ರಸಾದ್ ಅವರು ವಿವಾಹಿತರಾಗಿದ್ದು ಪತ್ನಿ, ಓರ್ವ ಪುತ್ರನಿದ್ದಾನೆ. ಘಟನೆ ಬಗ್ಗೆ ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕಿಶೋರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಳುಗಿರುವ ದೇಹ ಹೋರ ತೆಗೆಯಲು ಸ್ಥಳೀಯರು ಸಹಕರಿಸಿದ್ದಾರೆ.

ಡಿ.03 ರಂದು 11 ಗಂಟೆಗೆ ಬೆಳಾಲು ಹಾಲು ಸೊಸೈಟಿ ಹತ್ತಿರದ ಮೈದಾನದಲ್ಲಿ ಪ್ರಸಾದ್ ಪಾರ್ಥಿವ ಶರೀರ ಇರಿಸಲಾಗಿ ಸಾರ್ವಜನಿಕರ ದರ್ಶನಕ್ಕೆ ಮೂಲ ವ್ಯವಸ್ಥೆ ಮಾಡಲಾಗಿದೆ.
ಇದಾದ ಬಳಿಕ ಮಧ್ಯಾಹ್ನ ಪ್ರಸಾದ್ ಪಾರ್ಥಿವ ಶರೀರ ಸ್ಥಳಾಂತರಗೊಳ್ಳಲ್ಲಿದ್ದು ಬೆಳಾಲು ಕೂಡಿಗೆ ಸ್ವ ಗೃಹಕ್ಕೆ ತರಲಾಗುವುದು .ನಂತರ ಅಂತ್ಯಕ್ರಿಯೆಯ ವಿಧಿ ವಿಧಾನಗಳು ನಡೆಯಲಿದೆ.

Exit mobile version