Site icon Suddi Belthangady

ಬೆಳಾಲು: ಆರ್ ಎಸ್ ಎಸ್ ಸಂಘದ ಪ್ರಚಾರ ಪ್ರಮುಖ್ ಪ್ರಸಾದ್ ಆಕಸ್ಮಿಕವಾಗಿ ನೇತ್ರಾವತಿ ನದಿಯಲ್ಲಿ ಮುಳುಗಿ ನಾಪತ್ತೆ

ಬೆಳಾಲು: ಸುರುಳಿ ಕುಂಡಡ್ಕ ನಿವಾಸಿ ಪ್ರಸಾದ್(38 ವ) ಡಿ.02ರಂದು ಸೋಮವಾರ ಸಂಜೆ ಆಕಸ್ಮಿಕವಾಗಿ ನೇತ್ರಾವತಿ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರು ಭೇಟಿ ನೀಡಿದ್ದಾರೆ.

ಮೂವರು ನೀರಿಗೆ ಇಳಿದಿದ್ದು, ಈ ವೇಳೆ ಪ್ರಸಾದ್ ನೀರಿನಲ್ಲಿ ಮುಳುಗಿದ್ದಾರೆ. ನದಿ ಪ್ರದೇಶ ಆಳವಾಗಿರುವುದರಿಂದ ಮುಳುಗು ತಜ್ಞರ ಅನಿವಾರ್ಯವಿದೆ. ಘಟನೆ ಬಗ್ಗೆ ಸ್ಥಳಕ್ಕೆ ಪೊಲೀಸ್ ಇಲಾಖೆ ತೆರಳಿದ್ದಾರೆ.

ಪ್ರಸಾದ್ ಇವರು ಆರ್ ಎಸ್ ಎಸ್ ಸಂಘದ ಪ್ರಚಾರ ಸಂಘಟಕರಾಗಿದ್ದರು. ಮೃತರು ತಂದೆ ಓಡಿ ಮುಗೇರ, ಪತ್ನಿ ಹಾಗೂ ಮಗ ಇವರನ್ನು ಅಗಳಿದ್ದಾರೆ.

Exit mobile version