Site icon Suddi Belthangady

ತುಲು ಕಥೆ ಬರಹಗಾರರಿಗೆ ಸುವರ್ಣ ವೇದಿಕೆ: “ಕುದ್ಕ ಬಚ್ಚಿರೆ” ತುಲು ಸಣ್ಣ ಕಥಾ ಸ್ಪರ್ಧೆ: 10 ವಿಜೇತರಿಗೆ ನಗದು ಬಹುಮಾನ

ತುಲು ಕಥೆ ಬರಹಗಾರರಿಗೆ ಮಾಯಿಲು ಫಿಲ್ಮ್ಸ್ ಮತ್ತು ಕಡಲ್ ಸ್ಟುಡಿಯೋಸ್ ಸುವರ್ಣ ಅವಕಾಶವನ್ನು ಕಲ್ಪಿಸಿದ್ದು ನಿಮ್ಮ ಸ್ವಂತ ಕಥೆಗೆ “ಕುದ್ಕ ಬಚ್ಚಿರೆ” ಎಂಬ ವೇದಿಕೆಯನ್ನು ಸಿದ್ಧಪಡಿಸಿ ತುಲು ಸಣ್ಣ ಕಥಾ ಸ್ಪರ್ಧೆಯನ್ನು ಆಯೋಜಿಸಿದೆ.

ಮೂರು ಉತ್ತಮ ಕಥೆಗಳಿಗೆ 3,000ರೂ. ಗಳಂತೆ ಮತ್ತು 7 ಮೆಚ್ಚಿದ ಕಥೆಗಳಿಗೆ 1,500ರೂ. ಗಳಂತೆ ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಗುವುದು. ಆಯ್ದ ಕತೆಗಳನ್ನು ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಜ. 31ರ ಒಳಗಾಗಿ 800 ಪದಗಳ ಮಿತಿಯಲ್ಲಿ ತುಲು ಭಾಷೆಯಲ್ಲಿ ಸ್ವಂತ ಕಥೆ ಬರೆದು kudhkabachire@gmail.com – 9900634405 ನಂಬರಿಗೆ ಪಿ.ಡಿ.ಎಫ್ ಅಥವ ವರ್ಡ್ ಫಾರ್ಮ್ಯಾಟ್ ನಲ್ಲಿ ವಾಟ್ಸಾಪ್ ಮೂಲಕ ಕಳುಹಿಸಬಹುದು.

ಕೈ ಬರಹದ ಮೂಲಕ ಕತೆ ಬರೆಯುವವರು 2 A4 ಹಾಳೆ ಪುಟದಲ್ಲಿ ಕತೆ ಬರೆದು “ಆರ್ ಪ್ರದೀಪ್, ತಿರ್ತಗುತ್ತು ಗರ್ಡಾಡಿ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು, 574217″ ಈ ವಿಳಾಸಕ್ಕೆ ಪೋಸ್ಟ್ ಮೂಲಕ ಕಳಿಸಬಹುದು.

ಕಥೆ ಬರೆದವರ ಹೆಸರು, ವಿಳಾಸ, ವಯಸ್ಸು ಮತ್ತು ಕಥೆಯ ತಲೆಬರಹವನ್ನು ಪೋಸ್ಟ್ ಮೂಲಕ ಕಳಿಸುವವರು ಬೇರೆ ಒಂದು ಹಾಳೆಯಲ್ಲಿ ಹಾಗೂ ವಾಟ್ಸಾಪ್, ಮೇಲ್ ಮಾಡುವವರು ಬೇರೆ ಪುಟದಲ್ಲಿ ಕಳಿಸಬೇಕು.
ನಿಮ್ಮದೇ ಸ್ವಂತ ವಿಷಯದ ಆಧಾರದ ಮೇಲೆ ಕತೆ ಬರೆಯಬಹುದು. ಆದರೆ 14 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.

ಹೆಚ್ಚಿನ ಮಾಹಿತಿಗೆ ಆಯೋಜಕರ ಸೋಷಿಯಲ್ ಮೀಡಿಯಾವನ್ನು ಫಾಲೋ ಮಾಡಬಹುದು ಅಥವಾ 9900634405, 8762686433 ಈ ನಂಬರಿಗೆ ಕರೆ ಮಾಡಬಹುದು.

Exit mobile version