Site icon Suddi Belthangady

ಬೆಳ್ತಂಗಡಿ: ಬಾಲಕರ ಕರಾಟೆ ಸ್ಪರ್ಧೆಯಲ್ಲಿ ಸತ್ಯರ್ಥ ಎಸ್. ಜೈನ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಬೆಳ್ತಂಗಡಿ: ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಇದರ ವತಿಯಿಂದ ನ. 29 ಹಾಗೂ 30 ರಂದು ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆದ ಕರ್ನಾಟಕ ರಾಜ್ಯಮಟ್ಟದ 14ರ ವಯೋಮಾನದ ಬಾಲಕರ ಕರಾಟೆ ಸ್ಪರ್ಧೆಯಲ್ಲಿ ಸತ್ಯರ್ಥ ಎಸ್. ಜೈನ್ ಪ್ರಥಮ ಸ್ಥಾನವನ್ನು ಪಡೆದು ಪಂಜಾಬ್ ನಲ್ಲಿ ನಡೆಯುವ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಉಜಿರೆಯ ವಿದ್ಯಾರ್ಥಿಯಾಗಿದ್ದು, ಯಮತೋ ಶೋಟೋಕಾನ್ ಕರಾಟೆ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕರಾಟೆ ಶಿಕ್ಷಕ ಅಶೋಕ ಆಚಾರ್ಯ ಹಾಗೂ ಮಿಥುನ್ ರಾಜ್ ರಿಂದ ತರಬೇತಿ ಪಡೆಯುತ್ತಿದ್ದಾರೆ. ಸತೀಶ್ ಜೈನ್ ಹಾಗೂ ಮಂಜುಳಾ ಜೈನ್ ದಂಪತಿಯ ಪುತ್ರ.

Exit mobile version