Site icon Suddi Belthangady

ವಂದನೀಯ ಫಾ. ಅಬ್ರಹಾಂ ಪಟ್ಟೇರಿರವರಿಗೆ ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್ ವತಿಯಿಂದ ಸನ್ಮಾನ

ನೆಲ್ಯಾಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಹಿರಿಯ ಧರ್ಮಗುರು ಫಾ. ಅಬ್ರಹಾಂ ಪಟ್ಟೇರಿ ಅವರು ತಮ್ಮ ಯಾಜಕಾಭಿಷೇಕದ ರಜತ ಸಂಭ್ರಮದ ಹೊಸ್ತಿಲಲ್ಲಿ ನಿಲ್ಲುತ್ತಿದ್ದು, ಡಿ. 28 ರಂದು 25 ವರ್ಷಗಳ ಯಶಸ್ವೀ ಯಾಜಕ ಸೇವೆಯನ್ನು ಪೂರ್ಣಗೊಳಿಸಲಿದ್ದಾರೆ. ಉಡುಪಿ ಜಿಲ್ಲೆ ಮುದೂರು, ಬೈಂದೂರು ತಾಲ್ಲೂಕಿನ ಕಲ್ಮಕ್ಕಿ, ಹಾಗೂ ಬೆಳ್ತಂಗಡಿ ಬೆದ್ರಬೆಟ್ಟು ಚರ್ಚುಗಳಲ್ಲಿ ಸೇವೆ ಸಲ್ಲಿಸಿರುವ ಅವರು, ಕಳೆದ 14 ವರ್ಷಗಳಿಂದ ಧರ್ಮಪ್ರಾಂತ್ಯದ ಹಣಕಾಸು ಅಧಿಕಾರಿ ಸ್ಥಾನದಲ್ಲಿ ಸೇವೆ ನಿರ್ವಹಿಸುತ್ತಿದ್ದಾರೆ.

ಅಕ್ಷರ ಮತ್ತು ಆಹಾರ ದಾಸೋಹದ ಮೂಲಕ ಜನಸಾಮಾನ್ಯರ ಅಗತ್ಯಗಳಿಗೆ ಸ್ಪಂದಿಸುವ ಹೃದಯವಂತಿಕೆಯ ವ್ಯಕ್ತಿತ್ವವನ್ನು ಫಾ. ಪಟ್ಟೇರಿ ಹೊಂದಿದ್ದಾರೆ ಎಂದು ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚಿನ ವಂದನೀಯ ಫಾ. ಶಾಜಿ ಮಾತ್ಯು ಶುಭಾಶಯ ಸಂದೇಶದಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಚರ್ಚ್ ಟ್ರಸ್ಟಿಗಳಾದ ಶಿಬು, ಜೋಬಿನ್, ಅಲೆಕ್ಸ್, ಅಲ್ಬಿನ್, ಲೆಕ್ಕಪರಿಶೋಧಕ ಸುರೇಶ್, ಕಾರ್ಯದರ್ಶಿ ಜೆಸ್ಸಿ ಕೆ. ಜೆ., ವಂದನೀಯ ಭಗಿನಿ ಸಿಸ್ಟರ್ ಲಿಸ್ ಮಾತ್ಯು, ಮತ್ತು ರೊಯ್ ಉಪಸ್ಥಿತರಿದ್ದರು.

Exit mobile version