ಬೆಳ್ತಂಗಡಿ: ಕನಾಟಕ ಪ್ರದೇಶ ಕೃಷಿಕ ಸಮಾಜದ ಐದು ವರ್ಷದ ಅವಧಿಗೆ (2025-26 ರಿಂದ 2029-30ರವರಗೆ) ತಾಲೂಕು ಮಟ್ಟದ ಚುನಾವಣೆ ಡಿ.15ರಂದು ಬೆಳ್ತಂಗಡಿ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಬೆಳ್ಳಿಗೆ 8.00ರಿಂದ ಮಧ್ಯಾಹ್ನ 3.00ವರಗೆ ನಡೆಯಲಿದೆ.
ಉಮೇದುವಾರಿಕೆ ಸಲ್ಲಿಸುವವರಿಗೆ ಸಹಾಯಕ ಕೃಷಿ ನಿರ್ದೇಶಕ ಕಚೇರಿಯಲ್ಲಿ ನ.30 ರಿಂದ ನಾಮಪತ್ರ ವಿತರಿಸಲಾಗುವುದು. ಆಕಾಂಕ್ಷಿಗಳು ಚುನಾವಣಾಧಿಕಾರಿಗೆ ಅರ್ಜಿ ಜೊತೆ ರೂ.250 ಠೇವಣಿಯಾಗಿ ಪಾವತಿಸಿ ಮೂಲ ರಶೀದಿ ಹಾಗೂ ತಹಶೀಲ್ದಾರ್ ರಿಂದ ದೃಢೀಕೃತ ಪಹಣಿ ಪ್ರತಿಯೊಂದಿಗೆ ದಿನಾಂಕ ಡಿ.06 ಬೆಳ್ಳಿಗೆ 11.00 ರಿಂದ 5.00 ಒಳಗೆ ನಾಮಪತ್ರ ಸಲ್ಲಿಸಬೇಕು ಎಂದು ಬೆಳ್ತಂಗಡಿ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಹಾಗೂ ಬೆಳ್ತಂಗಡಿ ತಾಲೂಕು ಕೃಷಿಕ ಸಮಾಜದ ಚುನಾವಣೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.