ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವದ ಅಂಗವಾಗಿ ನ. 29ರಂದು ಸರ್ವ ಧರ್ಮ ಸಮ್ಮೇಳನ 92ನೇ ಅಧಿವೇಶನ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು. ಸಮ್ಮೇಳನವನ್ನು ಕರ್ನಾಟಕ ಸರಕಾರದ ಗೃಹ ಸಚಿವ ಡಾ. ಜಿ. ಪರಮೇಶ್ವರ ಉದ್ಘಾಟಿಸಿದರು. ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಗತಿಸಿದರು.
ಅಧ್ಯಕ್ಷತೆಯನ್ನು ಬೆಂಗಳೂರು ರಾಜರಾಜೇಶ್ವರಿ ನಗರ ಶ್ರೀ ಕೈಲಾಸ ಆಶ್ರಯ ಮಹಾಸಂಸ್ಥಾನದ ಜಯೇಂದ್ರ ಪುರಿ ಮಹಾ ಸ್ವಾಮೀಜಿ ವಹಿಸಿದ್ದರು. ಹಿಂದೂ ಧರ್ಮ ಹಾಗೂ ಸಮನ್ವಯದ ಕುರಿತು ಬೆಂಗಳೂರು ಸಂಶೋಧಕ ಮತ್ತು ಸಂವಹನನಕಾರ ಡಾ. ಜಿ. ವಿ. ಹರೀಶ್, ಕ್ರೇಸ್ತ ಧರ್ಮದಲ್ಲಿ ಸಮನ್ವದ ದೃಷ್ಟಿ ಎಂಬ ವಿಚಾರವಾಗಿ ಮಡಂತ್ಯಾರು ನಿವೃತ್ತ ಪ್ರಾಂಶುಪಾಲ ಡಾ. ಜೋಸೆಫ್ ಎನ್. ಎಮ್. ನಿವೃತ್ತ ಪ್ರಾಂಶುಪಾಲರು, ಮಡಂತ್ಯಾರು. ಇಸ್ಲಾಂ ಹಾಗೂ ಮಾನವತೆ ಕುರಿತು ರಾಷ್ಟ್ರೀಯ ಬಸವ ಭೂಷಣ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮೆಹತಾಬ ಇಬ್ರಾಹಿಂ ಸಾಬ ಕಾಗವಾಡ ಉಪನ್ಯಾಸ ಗೈದರು. ಡಿ. ಸುರೇಂದ್ರ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಂಜುಷಾ ವಸ್ತು ಸಂಗ್ರಹಾಲಯಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವ ಕುರಿತು ವೀಡಿಯೋ ಪ್ರದರ್ಶನ ಮತ್ತು ಪುಷ್ಪದಂತ ಮಾಹಿತಿ ನೀಡಿದರು. ಮುಖ್ಯ ತೀರ್ಪುಗಾರ ಡಾ. ಪ್ರದೀಪ್ ಭಾರದ್ವಾಜ್ ಇವರನ್ನು ಗೌರವಿಸಲಾಯಿತು. ಶ್ರದ್ದಾ ಅಮಿತ್, ಸುನೀಲ್ ಪಂಡಿತ್ ಸನ್ಮಾನ ಪತ್ರ ವಾಚಿಸಿದರು. ಉಜಿರೆ ರುಡ್ ಸೆಟ್ ನಿರ್ದೇಶಕ ಅಜಯ್ ವಂದಿಸಿದರು. ಉಪನ್ಯಾಸಕ ಶ್ರೀಧರ ಭಟ್ ಕಾರ್ಯಕ್ರಮ ನಿರೂಪಿಸಿದರು.