Site icon Suddi Belthangady

ಬೆಳ್ತಂಗಡಿ: ಗೋವಾದಲ್ಲಿ ಗೆಜ್ಜೆಗಿರಿ ಕ್ಷೇತ್ರದ ಯಕ್ಷಗಾನ-ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ

ಬೆಳ್ತಂಗಡಿ: ಉತ್ತರ ಗೋವಾದ ಪರ್ವಾರಿ ಪುಂಡಲೀಕ ದೇವಸ್ಥಾನದ ಸಭಾಗೃಹದಲ್ಲಿ ನ. 27 ರಂದು ತುಳುನಾಡಿನ ಗಂಡು ಮೆಟ್ಟಿನ ಕಲೆ ಯಕ್ಷಗಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಮೇಳದ ಮೂರನೇ ವರ್ಷದ ಯಕ್ಷಗಾನ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಪ್ರದರ್ಶನಗೊಂಡಿತು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಗೌರವಾಧ್ಯಕ್ಷ ಪೀತಾಂಬರ ಹೆರಾಜೆ ಚಾಲನೆ ನೀಡಿದರು.

ಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಮಾಜಿ ಅಧ್ಯಕ್ಷ ಜಯಂತ ನಡುಬೈಲ್, ಉದ್ಯಮಿ ಮೋಹನ್ ಶೆಟ್ಟಿ, ಗೋವಾ ತುಳುಕೂಟದ ಅಧ್ಯಕ್ಷ ಗಣೇಶ ಇರುವತ್ತೂರು, ಯಕ್ಷಗಾನ ಸಂಚಾಲಕ ಪ್ರಶಾಂತ ಪೂಜಾರಿ ಮಸ್ಕತ್, ನವೀನ್ ಸುವರ್ಣ, ಜಯಾನಂದ ಎಂ., ಜಯರಾಮ ಬಂಗೇರ, ನಾರಾಯಣ ಮಚ್ಚಿನ, ಗೋವಾ ಬಿಲ್ಲವ ಸಂಘದ ಅಧ್ಯಕ್ಷ ಪ್ರಕಾಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಗೋವಾ ರಾಜ್ಯದಲ್ಲಿ ಸಮಾಜದ ಸದಸ್ಯರನ್ನು ಸಂಘಟಿಸಿದ್ದ, ಗೌರವಾಧ್ಯಕ್ಷ ಚಂದ್ರಹಾಸ ಅಮೀನ್ ದಂಪತಿಗಳನ್ನು ಕ್ಷೇತ್ರದ ವತಿಯಿಂದ ಅಭಿನಂದಿಸಲಾಯಿತು. ಬಳಿಕ ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ಯಕ್ಷಗಾನ ಮಂಡಳಿಯಿಂದ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಎಂಬ ಐತಿಹಾಸಿಕ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.

Exit mobile version