ಬೆಳ್ತಂಗಡಿ: ಅಭಿವೃದ್ಧಿ ಕ್ರೆಡಿಟ್ ಕೋ -ಆಪರೇಟಿವ್ ಸೊಸೈಟಿ ನೂತನ ಶಾಖೆಯ ಶುಭಾರಂಭ ಕಾರ್ಯಕ್ರಮವು ನ. 11ರಂದು ವಿಘ್ನೇಶ್ ಕಾಂಪ್ಲೆಕ್ಸ್ 2ನೇ ಮಹಡಿಯಲ್ಲಿ ನಡೆಯಿತು. ಜನಾರ್ದನ ಸ್ವಾಮಿ ದೇವಸ್ಥಾನ ಉಜಿರೆ ಇದರ ಅನುವಂಶಿಕ ಆಡಳಿತ ಮೊಕ್ತೇಸರರು ಶರತ್ ಕೃಷ್ಣ ಪಡುವೆಟ್ನಾಯ ಉದ್ಘಾಟಿಸಿ ಮಾತನಾಡಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇರುವ ಕೊರತೆಯನ್ನು ನೀಗಿಸಿಕೊಂಡು ಇಂತಹ ಸಹಕಾರಿ ಬ್ಯಾಂಕುಗಳು ಇವತ್ತು ಅಭಿವೃದ್ಧಿ ಕಡೆಗೆ ಹೋಗುತ್ತಿದೆ. ಇಂತಹ ಬ್ಯಾಂಕುಗಳು ಗ್ರಾಮೀಣ ಪ್ರದೇಶದ ಆರ್ಥಿಕತೆಗೆ ಆಮ್ಲಜನಕ ಇದ್ದ ಹಾಗೆ ಚಿಕ್ಕ ಚಿಕ್ಕ ವ್ಯವಹಾರಗಳಿಗೆ ಸುಲಭವಾಗಿ ಸೇವೆಯನ್ನು ಕೊಡುವ ದೊಡ್ಡ ಪಾತ್ರ ವಹಿಸಿಕೊಂಡಿದೆ ಎಂದರು.
ಭದ್ರತಾ ಕೊಠಡಿಯ ಉದ್ಘಾಟನೆಯನ್ನು ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವಕೀಲರು ಶ್ರೀನಿವಾಸ ಗೌಡ, ಗುರುವಾಯನಕೆರೆ ವಿಕಾಸ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಎಲೋಸಿಯಸ್ ಡಿ’ಸೋಜ ಉಪಸ್ಥಿತರಿದ್ದರು.