ಉಜಿರೆ: ಬೆಂಗಳೂರಿನ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ನಡೆದ 26 ನೇ ರಾಷ್ಟ್ರ ಮಟ್ಟದ ಹಿರಿಯರ ಟೆನ್ನಿಸ್ ವಾಲಿಬಾಲ್ ಪಂದ್ಯಾಟದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕ್ರೀಡಾ ಸಂಘದ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದಲ್ಲಿ ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ.
ಸಿಂಪನ ಪ್ರಥಮ ವಾಣಿಜ್ಯ ವಿಭಾಗ, ತನು. ಕೆ.ಸಿ. ಹೆಗ್ಡೆ ಪ್ರಥಮ ಬಿ.ಎ, ಸಂಗೀತ ಪ್ರಥಮ ಎಂ.ಎಸ್.ಡಬ್ಲ್ಯೂ, ಹರಿಣಾಕ್ಷಿ ಪ್ರಥಮ ಎಂ.ಎಸ್.ಡಬ್ಲ್ಯೂ. ಇವರಿಗೆ ರಮೇಶ್. ಹೆಚ್ ಕ್ರೀಡಾ ಸಂಘದ ಕಾರ್ಯದರ್ಶಿಗಳು,
ಸಂದೇಶ್. ಬಿ. ಪೂಂಜ ಹಾಗು ದೈಹಿಕ ಶಿಕ್ಷಣ ನಿರ್ದೇಶಕ ಎಸ್. ಡಿ. ಎಂ ಪದವಿಪೂರ್ವ ಕಾಲೇಜು ಉಜಿರೆ ತರಬೇತಿಯನ್ನು ನೀಡಿರುತ್ತಾರೆ.