ಬೆಳ್ತಂಗಡಿ: ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾಗಿ ತೆಂಕಕಾರಂದೂರು ನಿವಾಸಿ ರವಿ ಪೂಜಾರಿ ಚಿಲಿಂಬಿ ಆಯ್ಕೆಯಾಗಿದ್ದಾರೆ.
ಗೆಜ್ಜೆಗಿರಿಯ ಅಭಿವೃದ್ಧಿಯ ಆರಂಭದ ಕಾಲದಿಂದ ಭಕ್ತಿ ಭಾವದ ಧಾರ್ಮಿಕತೆಯ ಜೊತೆ ಸಮಾಜದ ಅಭಿವೃದ್ಧಿಗೆ ಸಂಘಟನಾತ್ಮಕವಾಗಿ ಸಾಮಾಜಿಕ ಜಾಗೃತಿಯನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಇವರು ಕ್ಷೇತ್ರದಲ್ಲಿ ಸಂಘಟನಾ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಆಡಳಿತ ಸಮಿತಿಯ 8ನೇ ಮಹಾಸಭೆಯಲ್ಲಿ ಆಡಳಿತ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರು ಆಯ್ಕೆ ಮಾಡಿದರು.