Site icon Suddi Belthangady

ನಾರಾವಿ: ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

ನಾರಾವಿ: ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳು 2024-25ನೇ ಸಾಲಿನ ವಾರ್ಷಿಕ ಕ್ರೀಡಾಕೂಟದ ದಿನಾಂಕ ನ.20ರಂದು ಉದ್ಘಾಟನೆಗೊಂಡಿತು. ಸಂತ ಅಂತೋನಿ ಚರ್ಚ್ ನ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂಜಯ್ ಮಿರಾಂದ ಕ್ರೀಡಾಕೂಟವನ್ನು ಉದ್ಘಾಟಿಸಿ ನಿರಂತರ ಮೂರು ದಿನಗಳ ಪರ್ಯಂತ ನಡೆಯುವ ಕ್ರೀಡಾಕೂಟವು ಸುಗಮವಾಗಿ ಸಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಅಂತೋನಿ ಪದವಿ ಕಾಲೇಜಿನ ಪ್ರಾಂಶುಪಾಲ ವಂ.ಡಾ. ಆಲ್ವಿನ್ ಸೆರಾವೋ ವಹಿಸಿದ್ದರು. ವೇದಿಕೆಯಲ್ಲಿ ನಾರಾವಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಲಿಲ್ಲಿ ಪಾಯ್ಸ್, ಸಂತ ಪಾವ್ಲರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸುಪ್ರೀತಾ ಕ್ರಾಸ್ತಾ, ಸಂತ ಪಾವ್ಲರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸೋಫಿಯಾ ಫೆರ್ನಾಂಡಿಸ್ ಹಾಗೂ ಸಂತ ಅಂತೋನಿ ಪದವಿ ಕಾಲೇಜಿನ ಉಪಪ್ರಾಂಶುಪಾಲ ಸಂತೋಷ್ ಸಲ್ಡಾನ ಉಪಸ್ಥಿತರಿದ್ದರು.

ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ರಿಚರ್ಡ್ ಮೋರಸ್ ಎಲ್ಲರನ್ನು ಸ್ವಾಗತಿಸಿದರು, ಉಪನ್ಯಾಸಕ ಸಂತೋಷ್ ಧನ್ಯವಾದವಿತ್ತರು. ವಿಜ್ಞಾನ ವಿಭಾಗದ ಉಪನ್ಯಾಸಕಿ ಸೋನಿಯಾ ಡಿ’ಸೋಜಾ ಕಾರ್ಯಕ್ರಮವನ್ನು ನಿರೂಪಿಸಿದರು.

Exit mobile version