Site icon Suddi Belthangady

ಮಚ್ಚಿನ: ಗ್ರಾಮಮಟ್ಟದ ಬಾಲ ಮೇಳ ಕಾರ್ಯಕ್ರಮ

ಮಚ್ಚಿನ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಬೆಳ್ತಂಗಡಿ, ಶಿಶು ಅಭಿವೃದ್ಧಿ ಯೋಜನೆ ಬೆಳ್ತಂಗಡಿ, ಗ್ರಾಮ ಪಂಚಾಯತ್ ಮಚ್ಚಿನ, ಸ್ತ್ರೀ ಶಕ್ತಿ ಗೊಂಚಲು ಮಚ್ಚಿನ ಇದರ ಆಶ್ರಯದಲ್ಲಿ ಗ್ರಾಮಮಟ್ಟದ ಬಾಲ ಮೇಳ ಕಾರ್ಯಕ್ರಮವು ಸಮುದಾಯ ಭವನ ಬಳ್ಳಮಂಜದಲ್ಲಿ ನ. 21ರಂದು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ನಾಯಕಿ ತನ್ವಿ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಕರಾಯ ವಲಯದ ಮೇಲ್ವಿಚಾರಕಿ ಸುಮನ ಮಾತನಾಡಿ ಭಾರತದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರು, ಇವರ ಜನ್ಮ ದಿನದ ಅಂಗವಾಗಿ ನ. 14 ರಂದು ಮಕ್ಕಳ ದಿನಾಚರಣೆ.

ಬಾಳ ಮೇಳ ಕಾರ್ಯಕ್ರಮ ಅವರ ಹುಟ್ಟು ಹಬ್ಬದ ನೆನಪಿಗಾಗಿ ಪ್ರತಿ ವರ್ಷ ನಡೆಸುತ್ತಾ ಬರುತ್ತಿದ್ದು, ಮಕ್ಕಳ ಪ್ರತಿಭೆಗಳನ್ನು ಹೊರ ತರಲು ಇಂತಹ ಸುವರ್ಣ ಅವಕಾಶವನ್ನು ಮಚ್ಚಿನ ಗ್ರಾಮ ಮಟ್ಟದ ಬಾಲ ಮೇಳ ಕಾರ್ಯಕ್ರಮದಲ್ಲಿ ದೊರಕಿರುವುದು ತುಂಬ ಸಂತೋಷದ ವಿಷಯ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಉತ್ತಮವಾಗಿ ಬೆಳೆಯಲು ಇಂತಹ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯ ಪ್ರಮೋದ್ ಕುಮಾರ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗೌರಿಶಂಕರ್, ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಸೋಮಾವತಿ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ವಸಂತಿ ಲಕ್ಷ್ಮಣ್, ಲೋಲಾಕ್ಷಿ, ಜಯಲಕ್ಷ್ಮಿ ಮುರಾರ್ಜಿ ಶಾಲಾ ಶಿಕ್ಷಕಿ ಆಶಾ, ಮಚ್ಚಿನ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಅಮಿತಾ ಪಾಲಡ್ಕ, ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಉಮಾದೇವಿ ಉಪಸ್ಥಿತರಿದ್ದರು.

( ಮಚ್ಚಿನ ಗ್ರಾಮದ 8 ಅಂಗನವಾಡಿ ಕೇಂದ್ರಗಳ ಮಕ್ಕಳ ಚದ್ಮವೇಷ ಸ್ಪರ್ಧೆ ಡ್ಯಾನ್ಸ್ ಹಾಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಅಂಗನವಾಡಿ ಕೇಂದ್ರಗಳಲ್ಲಿ ಸಮಗ್ರ ಬಹುಮಾನವನ್ನು ಪ್ರಥಮ ನೆತ್ತರ ಅಂಗನವಾಡಿ ಕೇಂದ್ರ ಹಾಗೂ ದ್ವಿತೀಯ ತಾರೆಮಾರು ಅಂಗನವಾಡಿ ಕೇಂದ್ರ ಪಡೆದುಕೊಂಡಿತ್ತು.) ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಚ್ಚಿನ ಅಂಗನವಾಡಿ ಶಾಲಾ ನಾಯಕಿ ತನ್ವಿ ಶೆಟ್ಟಿ ಮಾತನಾಡಿ ಭಾಗವಹಿಸಿದ ಅಂಗನವಾಡಿ ಪುಟಾನಿಗಳಿಗೆ ಶುಭ ಹಾರೈಸಿದರು.

ನೆತ್ತರ ಅಂಗನವಾಡಿ ಶಿಕ್ಷಕಿ ಗೀತಲತಾ ಸ್ವಾಗತಿಸಿದರು, ಸದಾಶಿವ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು, ತಾರೆಮಾರ್ ಅಂಗನವಾಡಿ ಶಿಕ್ಷಕಿ ಪುಷ್ಪ ವಂದಿಸಿದರು. ಅಂಗನವಾಡಿ ಕೇಂದ್ರಗಳ ಶಿಕ್ಷಕಿರಾದ ಪದ್ಮಪ್ರಿಯ ಮಚ್ಚಿನ, ಪುಷ್ಪ ತಾರೆಮಾರ್, ನವನೀತ ಕುತ್ತಿನ, ಮೀನಾ ಕಲ್ಲಗುಡ್ಡೆ, ರಚಿತಾ ಮುಡಿಪಿರೆ, ವೇದಾವತಿ ಪಾಲಡ್ಕ, ಶ್ರೀಮತಿ ಕುದ್ರಕ್ಕ ಹಾಗೂ ಅಂಗನವಾಡಿ ಸಹಾಯಕಿಯರು, ಮಕ್ಕಳ ಪೋಷಕರು ಸಹಕರಿಸಿದರು. ವರದಿ: ಹರ್ಷ ಬಳ್ಳಮಂಜ

Exit mobile version