ಬೆಳ್ತಂಗಡಿ: ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದ ಪೋರ್ಟ್ರೇಟ್ ಪಾರ್ಲೆ ಟೆಸ್ಟ್ ನಲ್ಲಿ ವೃತ್ತ ನಿರೀಕ್ಷಕರ ಕಚೇರಿಯ ತನಿಖಾ ಸಹಾಯಕ ವಿಜಯಕುಮಾರ್ ರೈ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾರೆ.
ವೇಣೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ಮೂರು ವರ್ಷಗಳ ಹಿಂದೆ ಬಡ್ತಿ ಪಡೆದು ಬೆಳ್ತಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕರ ಕಚೇರಿಗೆ ವರ್ಗಾವಣೆಗೊಂಡರು.
ಜಾಲ್ಸೂರು ಸಮೀಪದ ಬೆಳ್ಳಿಪ್ಪಾಡಿ ಸೀತಾರಾಮ ರೈ ಅವರ ಪುತ್ರ. ಗುರುವಾಯನಕೆರೆ ವಿದ್ವತ್ ಕಾಲೇಜಿನ ಉಪನ್ಯಾಸಕಿಯಾಗಿರುವ ಪತ್ನಿ ಅನುಷಾ ಹಾಗೂ ಪುತ್ರ ಅಯ್ಯುಕ್ತ ರೊಂದಿಗೆ ವೇಣೂರಿನಲ್ಲಿ ನೆಲೆಸಿದ್ದಾರೆ.