Site icon Suddi Belthangady

ಬೆಳ್ತಂಗಡಿ: ಗ್ರಂಥಾಲಯ ಮೇಲ್ವಿಚಾರಕರಿಗೆ ಡಿಜಿಟಲ್ ಕೌಶಲ್ಯ ಹಾಗೂ ನಾಯಕತ್ವ ತರಬೇತಿ ಕಾರ್ಯಗಾರ

ಬೆಳ್ತಂಗಡಿ: ಶಿಕ್ಷಣ ಪೌಂಡೇಶನ್ ಹಾಗೂ ಡೆಲ್ ಸಂಸ್ಥೆಯ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಡಿಯಲ್ಲಿ ಬೆಳ್ತಂಗಡಿ ತಾಲೂಕಿನ ಗ್ರಂಥಾಲಯ ಮೇಲ್ವಿಚಾರಕರಿಗೆ ಒಂದು ದಿನದ ಡಿಜಿಟಲ್ ಕೌಶಲ್ಯ ಹಾಗೂ ನಾಯಕತ್ವ ಮತ್ತು ಸಹಭಾಗಿತ್ವ ಚಟುವಟಿಕೆಗಳನ್ನೊಳಗೊಂಡ ತರಬೇತಿಯನ್ನು ಬೆಳ್ತಂಗಡಿ ತಾಲೂಕು ಪಂಚಾಯತ್ ನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ದೀಪ ಬೆಳಗಿಸುವ ಮೂಲಕ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಯಾಗಿರುವ ಭವಾನಿ ಶಂಕರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರಸ್ತುತ ದಿನಗಳಲ್ಲಿ ಡಿಜಿಟಲ್ ಸಾಕ್ಷರತೆಯ ಅಗತ್ಯತೆಯ ಬಗ್ಗೆ ಹಾಗೂ ಈ ತರಬೇತಿಯಿಂದಾಗುವ ಸಕಾರತ್ಮಕ ಪರಿಣಾಮಗಳ ಬಗ್ಗೆ ತಿಳಿಸಿಸಿದರು ಹಾಗೂ ಶುಭ ಹಾರೈಸಿದರು. ಶಿಕ್ಷಣ ಪೌಂಡೇಶನ್ ವತಿಯಿಂದ ಗ್ರಾಮ ಪಂಚಾಯತ್ ಅರಿವು ಕೇಂದ್ರಗಳಿಗೆ ಅನೇಕ ರೀತಿಯ ಡಿಜಿಟಲ್ ಸಾಧನಗಳನ್ನು ಒದಗಿಸಿದ್ದು, ಅವುಗಳ ಸಹಾಯದಿಂದ ಗ್ರಾಮೀಣ ಭಾಗದ ಸಮುದಾಯದ ಜನರು ಹಾಗೂ ಸ್ವ ಸಹಾಯ ಮಹಿಳೆಯರು ಡಿಜಿಟಲ್ ಸಾಕ್ಷರರಾಗಬೇಕು, ಇದರ ಮೂಲಕ ತಮ್ಮ ದೈನಂದಿನ ಉದ್ಯೋಗ, ವ್ಯವಹಾರಗಳಲ್ಲಿ, ಸದೃಢರಾಗಬೇಕು ಎಂಬ ಕಿವಿಮಾತು ತಿಳಿಸಿದರು ಹಾಗೂ ಇನ್ನೋರ್ವ ಅತಿಥಿಯಾಗಿದ್ದ ಸಹಾಯಕ ನಿರ್ದೇಶಕ ಪ್ರಶಾಂತ್ ಶುಭ ಹಾರೈಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಣ ಫೌಂಡೇಶನ್ ಜಿಲ್ಲಾ ಸಂಯೋಜಕ ಲವಿಶ್ ನಿರ್ವಹಿಸಿದರು. ಶಿಕ್ಷಣ ಫೌಂಡೇಶನ್ ಉಡುಪಿ ಜಿಲ್ಲಾ ಸಂಯೋಜಕರಾದ ರೀನಾ ಹೆಗಡೆಯವರು ಡಿಜಿಟಲ್ ಕೌಶಲ್ಯ ಮತ್ತು ನಾಯಕತ್ವ ತರಬೇತಿಯನ್ನು ನಡೆಸಿಕೊಟ್ಟರು. 42 ಅರಿವು ಕೇಂದ್ರಗಳ ಮೇಲ್ವಿಚಾರಕರು ಈ ತರಬೇತಿಯ ಸದುಪಯೋಗ ಪಡೆದುಕೊಂಡರು. ಗ್ರಾಮ ಪಂಚಾಯತ್ ಅರಿವು ಕೇಂದ್ರ ಮೇಲ್ವಿಚಾರಕ ದೇಕಯ್ಯ ಗೌಡ ಇವರು ಧನ್ಯವಾದ ತಿಳಿಸಿದರು.

Exit mobile version