Site icon Suddi Belthangady

ಎಲ್ಲಾ ಜಾತಿಯ ಜನರ ಅವಕಾಶಕ್ಕಾಗಿ ಒಳ ಮೀಸಲಾತಿ ಅಗತ್ಯ : ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್. ದ್ವಾರಕಾನಾಥ್ – ಕರ್ನಾಟಕ ದಲಿತ ಚಳುವಳಿ 50ರ ಸಂಭ್ರಮ – ವಿಚಾರ ಸಂಕಿರಣ

ಬೆಳ್ತಂಗಡಿ: ಒಳಮೀಸಲಾತಿ ಜಾತಿ ಗಣತಿಯನ್ನು ರಾಜಕೀಯ ಕಾರಣಕ್ಕಾಗಿ ಇನ್ಯಾವುದೋ ಸ್ವಾರ್ಥಕ್ಕಾಗಿ ಸಾರಾಸಗಟಾಗಿ ವಿರೋಧಿಸುವುದು ಸರಿಯಲ್ಲ. ಸಮಾಜದ ಎಲ್ಲಾ ವರ್ಗದ ಜಾತಿಯ ಜನರಿಗೂ ಅವಕಾಶಗಳು ಲಭಿಸಲು ಒಳ ಮೀಸಲಾತಿ ಅಗತ್ಯವಾಗಿದೆ ಎಂದು ಹೈಕೋರ್ಟ್ ಹಿರಿಯ ವಕೀಲ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್. ದ್ವಾರಕಾನಾಥ್ ಹೇಳಿದರು.
ಅವರು ಕರ್ನಾಟಕ ದಲಿತ ಚಳುವಳಿ 50ರ ಸಂಭ್ರಮಾಚರಣೆ ಪ್ರಯುಕ್ತ ದಲಿತ ಚಳುವಳಿ 50ರ ಸಂಭ್ರಮಾಚರಣಾ ಸಮಿತಿ ನ:17ನೇ ಭಾನುವಾದಂದು ಬೆಳ್ತಂಗಡಿ ಹೊಲಿ ರೆಡಿಮರ್ ಅಡಿಟೋರಿಯಂನಲ್ಲಿ
ಆಯೋಜಿಸಿದ ವಿಚಾರ ಸಂಕಿರಣದಲ್ಲಿ ಮೂರನೇ ವಿಚಾರ ಗೋಷ್ಠಿಯಲ್ಲಿ “ಭಾರತೀಯ ಸಂವಿಧಾನದ ಆಶಯ ಮತ್ತು ಒಳ ಮೀಸಲಾತಿ” ಎಂಬ ವಿಷಯದಲ್ಲಿ ವಿಚಾರ ಮಂಡನೆ ಮಾಡುತ್ತಾ, ಒಳ ಮೀಸಲಾತಿಯನ್ನು ಜಾರಿಗೆ ತರಬೇಕಾದರೆ ಸಮಗ್ರವಾದ ದಾಖಲೆಗಳನ್ನು ಇರಿಸಿ ಅಧ್ಯಯನ ನಡೆಸಬೇಕಾಗಿದೆ. ಈಗ ಆಯೋಗದ ಬಳಿ ಸಮಗ್ರವಾದ ದಾಖಲೆಗಳಿವೆ. ಸಂವಿಧಾನವು ದೇಶದ ಪ್ರತಿಯೊಂದು ಜೀವಿಗೂ ಹಕ್ಕುಗಳನ್ನು ನೀಡಿದೆ. ಅದರಿಂದ‌ ಪ್ರಯೋಜನ ಪಡೆಯದವರು ಯಾರೂ ಇಲ್ಲ ಸಂವಿಧಾನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಕಾರ್ಯ ಅಗತ್ಯವಾಗಿದೆ ಎಂದರು. ಸಮಿತಿ ಗೌರವಾಧ್ಯಕ್ಷ ಚೆನ್ನಕೇಶವ ಮೂರನೇ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿದರು.

ದಲಿತ ಚಳುವಳಿಯ ಸಾಂಸ್ಕೃತಿಕ ನಾಯಕ ಗ.ನಾ. ಅಶ್ವತ್ಥ್ ಹೋರಾಟದ ಹಾಡಿನ ಮೂಲಕ ಹಾಗೂ ಬೆಳ್ತಂಗಡಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಕು.ಗೌರಿ , ಅಂಬೇಡ್ಕರ್ ಮತ್ತು ಪ್ರೊ.ಬಿ.ಕೃಷ್ಣಪ್ಪ ಅವರ ಭಾವಚಿತ್ರಕ್ಕೆ ಹಾರಾರ್ಪಣೆ ಮೂಲಕ ವಿಚಾರ ಸಂಕಿರಣವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಭಾರತೀಯ ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ಓದಲಾಯಿತು. ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಗ.ನಾ. ನಾವು ಒಳ ಮೀಸಲಾತಿಯ ವಿರೋಧಿಗಳಲ್ಲ, ಒಳ ಮೀಸಲಾತಿಯ ಪರ ಇರುವವರು , ಸಂವಿಧಾನ ನಮಗೆ ಎಲ್ಲಾ ಹಕ್ಕುಗಳನ್ನು ಕೊಟ್ಟಿದೆ,
ಒಳ ಮೀಸಲಾತಿಯಿಂದ ಯಾವ ಸಮುದಾಯಕ್ಕೂ ಅನ್ಯಾಯವಾಗಬಾರದು. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಅಭಿಪ್ರಾಯಪಟ್ಟರು.

ದಲಿತ ಚಳುವಳಿ 50ರ ಸಂಭ್ರಮಾಚರಣಾ ಸಮಿತಿ ಅಧ್ಯಕ್ಷ ಬಿ.ಕೆ. ವಸಂತ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿದ್ದ ಪ್ರಥಮ ಗೋಷ್ಠಿಯಲ್ಲಿ ಐಎಎಸ್, ಕೆಎಎಸ್ ತರಬೇತಿದಾರ , ಜಾ.ಕ. ರಾಜ್ಯ ಸಮಿತಿ ಸದಸ್ಯ ಮೋಹನ್ ಜಿ.ಕೆ. ಅವರು “ಪ್ರಾಚೀನ ಇತಿಹಾಸ ಮತ್ತು ಭಾರತದ ಸಮಾಜ ಸುಧಾರಕರು” ಎಂಬ ವಿಷಯದಲ್ಲಿ ವಿಚಾರ ಮಂಡನೆ ಮಾಡಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ , ಸಮಿತಿ ಕಾರ್ಯಾಧ್ಯಕ್ಷ ಕೆ.ನೇಮಿರಾಜ್ ಕಿಲ್ಲೂರು ಅಧ್ಯಕ್ಷತೆವಹಿಸಿದ್ದ ಎರಡನೇ ಗೋಷ್ಠಿಯಲ್ಲಿ ಮೂಡಬಿದ್ರೆ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ. ಶಾಲಾ ಪದವೀಧರ ಶಿಕ್ಷಕ ಡಾ.ದೊರೆ ಸ್ವಾಮಿ ಅವರು “ಕರ್ನಾಟಕ ದಲಿತ ಚಳುವಳಿಯ ಇತಿಹಾಸ ಮತ್ತು ವರ್ತಮಾನದ ಸವಾಲುಗಳು” ಎಂಬ ವಿಚಾರ ಮಂಡನೆ ಮಾಡಿದರು.

ಪ್ರಥಮ ಗೋಷ್ಠಿಯಲ್ಲಿ ವಿದ್ಯಾರ್ಥಿ ಸಮಿತಿ ಅಧ್ಯಕ್ಷ ಭರತ್, ಪ್ರಧಾನ ಕಾರ್ಯದರ್ಶಿ ಕು.ನಂದಿತಾ, ಎರಡನೇ ಗೋಷ್ಠಿಯಲ್ಲಿ ನ್ಯಾಷನಲ್ ಯೂತ್ ಅವಾರ್ಡ್ಸ್ ಪುರಸ್ಕೃತೆ, ಜಿ.ಪಂ.ಮಾಜಿ ಸದಸ್ಯೆ ಸಿ.ಕೆ.ಚಂದ್ರಕಲಾ, ಮಹಿಳಾ ಸಮಿತಿ ಅಧ್ಯಕ್ಷೆ ಕವಿತಾ ಕಿರಣ್ ಪುದುವೆಟ್ಟು, ಅಕ್ರಮ – ಸಕ್ರಮ ಸಮಿತಿ ಸದಸ್ಯ , ಸಮಿತಿ ಕೋಶಾಧಿಕಾರಿ ಶ್ರೀಧರ್ ಎಸ್ ಕಳೆಂಜ, ಮೂರನೇ ಗೋಷ್ಠಿಯಲ್ಲಿ ಕೆ.ಡಿ.ಪಿ.ಸದಸ್ಯ, ಸಮಿತಿ ಕಾರ್ಯಾಧ್ಯಕ್ಷ ಎಸ್.ಬೇಬಿ ಸುವರ್ಣ, ಜಿ.ಪಂ. ಮಾಜಿ ಸದಸ್ಯ , ಸಮಿತಿ ಕಾರ್ಯಾಧ್ಯಕ್ಷ ಶೇಖರ್ ಕುಕ್ಕೇಡಿ, ಯುವ ನ್ಯಾಯವಾದಿಗಳಾದ ಕು.ಸುಮಾ ನಿಡ್ಲೆ, ಕು.ಶ್ವೇತಾ ಎ., ಕರಂಬಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮೂರು ವಿಚಾರ ಗೋಷ್ಠಿಗಳನ್ನು ಕ್ರಮವಾಗಿ ಶಿಕ್ಷಕ , ಆಲದಪದವು ಅಕ್ಷರ ಭಾರತಿ ವಿದ್ಯಾಲಯದ ಶಿಕ್ಷಕ, ಸಮಿತಿ ಕಾರ್ಯದರ್ಶಿ ಸುಕೇಶ್ ಕೆ., ಮಾಲಾಡಿ, ಶ್ರೀಧರ್ ಎಸ್ ಕಳೆಂಜ, ಪತ್ರಕರ್ತ, ಸಮಿತಿ ಪ್ರಧಾನ ಕಾರ್ಯದರ್ಶಿ ಅಚುಶ್ರೀ ಬಾಂಗೇರು ನಿರ್ವಹಣೆಗೈದರು. ನಾರಾಯಣ ಪುದುವೆಟ್ಟು, ಎನ್.ಸಿ. ಸಂಜೀವ ನೆರಿಯಾ, ಸುಕೇಶ್ ಕೆ., ಮಾಲಾಡಿ, ಲೋಕೇಶ್ ನೀರಾಡಿ, ಹೈಕೋರ್ಟ್ ವಕೀಲೆ ನಮಿತಾ , ಉದಯ ಗೋಳಿಯಂಗಡಿ, ಶ್ರೀನಿವಾಸ್ ಪಿ.ಎಸ್. ಉಪಸ್ಥಿತರಿದ್ದರು.

Exit mobile version